ಮಂಜೇಶ್ವರ: ಶಾಲಾ ಕಲೋತ್ಸವ ವೇದಿಕೆಯಲ್ಲಿ ಬೇರೆ ದೇಶದ ಧ್ವಜ ಹಾರಿಸದಂತೆ ತಡೆದ ಅಧ್ಯಾಪಕರ ಸಮಾಯೋಚಿತ ಕಾರ್ಯ ಅಭಿನಂದನಿಯ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು.
ಕೇರಳ ರಾಜ್ಯಪಾಲರು ಭಾರತ ಮಾತೆಗೆ ಪುಷ್ಪರ್ಚನೆ ಮಾಡಿದಕ್ಕೆ ಅವರ ವಿರುದ್ಧ ರಸ್ತೆ ರಸ್ತೆಗಳಲ್ಲಿ ಪ್ರತಿಭಟನೆ ಮಾಡಿದವರು ವಿಶ್ವವಿದ್ಯಾನಿಲಯಗಳಲ್ಲಿ ಗದ್ದಲ ಮಾಡಿದವರು ವಿದ್ಯಭ್ಯಾಸ ಬಂದ್ ನಡೆಸಿದವರು ಕಲೋತ್ಸವ ವೇದಿಕೆಯಲ್ಲಿ ಪ್ಯಾಲೇಸ್ತಿನ್ ಧ್ವಜ ಹಾರಿಸುವುದು ಅಭಿವ್ಯೆಕ್ತಿ ಸ್ವಾತಂತ್ರ್ಯ ಎನ್ನುವುದು ಹಾಸ್ಯಸ್ಪದ. ಮಂಜೇಶ್ವರ ಶಾಸಕರು ಜನಸಂದಣಿ ಇರುವಲ್ಲಿ ಬಂದು ಬೀದಿ ನಾಟಕ ಮಾಡುವುದನ್ನು ನಿಲ್ಲಿಸಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಗ್ರಹಿಸಿದ್ದಾರೆ.
ಪ್ರತಿಭಟನೆ ಹೆಸರಲ್ಲಿ ಅಧ್ಯಾಪಕರನ್ನು ದಿಗ್ಬಂದನ ಮಾಡುವುದು, ಗಲಭೆಗೆ ಪ್ರೇರಣೆ ನೀಡುವುದು, ಖಂಡನಿಯ, ಮಕ್ಕಳನ್ನು ಅಧ್ಯಾಪಕರ ವಿರುದ್ಧ ಎತ್ತಿ ಕಟ್ಟುವುದು ಶಾಸಕರಿಗೆ ಭೂಷಣವಲ್ಲ. ಪ್ಯಾಲೇಸ್ತಿನ್ ಬದಲಿಗೆ ಇನ್ನೊಂದು ತಂಡ ಗೋ ಹತ್ಯೆ ನಿಷೇದ ಬಗ್ಗೆ ಅಥವಾ ಪೆಹಾಲ್ಗಮ್ ದಾಳಿಯ ಬಗ್ಗೆ ಮೈಮ್ ಶೋ ನಡೆಸಿದರೆ ಶಾಸಕರು ಅಭಿವ್ಯೆಕ್ತಿ ಸ್ವಾತಂತ್ರ್ಯ ಅನ್ನುವ ಸಹಿಷ್ಣುತೆಯನ್ನು ತೋರುವರೇ ಎಂದು ಬಿಜೆಪಿ ಪ್ರಶ್ನಿಸಿದೆ.




