ಉಪ್ಪಳ: ವಸುದೈವ ಕುಟುಂಬಕಂ ಎಂಬ ಮಹಾಧ್ಯೇಯವನ್ನು ಇಟ್ಟುಕೊಂಡ ನಮ್ಮ ಈ ಹಿಂದೂ ಸಮಾಜದಲ್ಲಿ ಧರ್ಮದ ಅರಿವು ಮೂಡಬೇಕಾದದ್ದು ಬಹಳ ಅಗತ್ಯ. ನಮ್ಮ ಧರ್ಮದ ವಿವಿಧ ಮಜಲುಗಳನ್ನು ಇಂದಿನ ಮಕ್ಕಳು, ಯುವಶಕ್ತಿ ತಿಳಿದುಕೊಳ್ಳಬೇಕಾದದ್ದು ಇಂದಿನ ಪ್ರಥಮ ಆದ್ಯತೆ. ಆಧ್ಯಾತ್ಮವೇ ನಮ್ಮ ಧರ್ಮದ ಜೀವಾಳ. ಇದನ್ನು ಮರೆತರೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಾರ್ವಜನಿಕ ಉತ್ಸವಗಳು ಕೇವಲ ವಿಜ್ರೃಂಭಿಸುವ ಉತ್ಸವಗಳಾಗದೆ ಇದರ ಹಿಂದೆ ಇರುವ ಧರ್ಮದ ತಿರುಳು ಮತ್ತು ನಮ್ಮ ಒಗ್ಗಟ್ಟನ್ನು ಪ್ರದೀಪ್ತಗೊಳಿಸಬೇಕು ಎಂಬ ಉದ್ಭೋದಕ ಮಾತುಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸಮಿತಿಯ ಸದಸ್ಯ ವೆಂಕಟೇಶ ಪಾಠಕ್ ಹೇಳಿದರು.
ಮಂಗಲ್ಪಾಡಿ ಏಕಾಹ ಭಜನಾ ಮಂದಿರದ 39ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಜನಾ ಮಂದಿರದ ಟ್ರಸ್ಟಿ ಡಾ. ಶ್ರೀಧರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಡುಗೈ ದಾನಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಈ ಭಜನಾ ಮಂದಿರದ ಬಗ್ಗೆ ನಮಗೆ ಒಳ್ಳೆಯ ಅಭಿಮಾನ ಇದೆ, ಇದರ ಬೆಳವಣಿಗೆಗೆ ನಾವೆಲ್ಲರೂ ಸಹಕರಿಸಬೇಕು ಎಂದರು.
ರಾಧಾಕೃಷ್ಣ ತುಂಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾರ್ತಿಕ್ ಶೆಟ್ಟಿ ಮಜಿಬೈಲು ಹಾಗೂ ರಜಿನಿ ಸುರೇಶ್ ಮುಟ್ಟ ಪಾಲ್ಗೊಂಡಿದ್ದರು. ಕುಮಾರಿ ಶ್ರಾವ್ಯ ತುಂಗಾ ಮತ್ತು ವಿನುತಾ ಪರಂಕಿಲ ಪ್ರಾರ್ಥನೆಯನ್ನು ಹಾಡಿದರು. ಕಾರ್ತಿಕ್ ಶೆಟ್ಟಿಗಾರ್ ಪರಂಕಿಲ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಶ್ರೀರಾಮ ಕಾರಂತ ಮತ್ತು ಜಯಲಕ್ಷ್ಮಿ ಕಾರಂತರನ್ನು ಹಾಗೂ ಸದಾನಂದ ಎ ಶಿರಿಯ ಮತ್ತು ಜಯಂತ್ ಎಸ್ ಶಿರಿಯ ಇವರನ್ನು ಸನ್ಮಾನಿಸಲಾಯಿತು. ಮಧ್ಯಾಹ್ನ ಅನ್ನ ಸಂತರ್ಪಣೆಯ ನಂತರ ವಿಸರ್ಜನಾ ಶೋಭಾಯಾತ್ರೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.




.jpg)
