ಕುಂಬಳೆ: ಕುಂಬಳೆ ಶಾಲೆಯ ನಡೆದ ಕಲೋತ್ಸವವನ್ನು ಸಂಬಂಧಿಸಿದಂತೆ ಎಂಎಸ್‍ಎಫ್ ಹಾಗೂ ಎಸ್.ಎಫ್.ಐ ಕ್ರಮ ಖಂಡನೀಯ. ಯೂತ್ ಲೀಗ್ ಕಾರ್ಯಕರ್ತರು ಎಂಎಸ್‍ಎಫ್ ಹೆಸರಿನಲ್ಲಿ ಶಾಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಶಾಲೆಯಲ್ಲಿ ಪ್ಯಾಲೆಸ್ಟೈನ್ ಸಮರ್ಥನೆ ಗೀತೆಯ ಪ್ರದರ್ಶನವನ್ನು ನಿಲ್ಲಿಸಿದ ಶಾಲಾ ಅಧಿಕಾರಿಗಳ ಕ್ರಮವನ್ನು ಸ್ವಾಗತಿಸುತ್ತಿದೆ ಎಂದು ಬಿಜೆಪಿ ಕುಂಬಳೆ ಮಂಡಲ ಸಮಿತಿ ತಿಳಿಸಿದ್ದಾರೆ .
ಶಾಲಾ ಕಲಾ ಉತ್ಸವದಂತಹ ಮಕ್ಕಳ ಪ್ರತಿಭೆಯನ್ನು ಉತ್ತೇಜಿಸುವ ಕಾರ್ಯಕ್ರಮದಲ್ಲಿ ಕೋಮು ಸೌಹಾರ್ದ ಕೆಡಿಸುವ ಕಾರ್ಯಕ್ರಮವನ್ನು ಪ್ರಸ್ತುತಪಡಿಸುವಲ್ಲಿ ನಿಗೂಢತೆ ಇದೆ. ಹೊರ ದೇಶದ ಧಾರ್ಮಿಕ ಉಗ್ರಗಾಮಿ ಶಕ್ತಿಗಳು ಧಾರ್ಮಿಕ ವಿಭಾಗಿಯತೆಯನ್ನು ಹುಟ್ಟುಹಾಕಲು ಮಕ್ಕಳನ್ನು ಹೀಗೆ ಮಾಡುವಂತೆ ಮಾಡಿದೆ...
ಇದರ ವಿರುದ್ಧ ಸಮಗ್ರ ತನಿಖೆ ಅಗತ್ಯವಿದೆ.
ಈ ವಿಷಯದ ಬಗ್ಗೆ ಶಿಕ್ಷಣ ಸಚಿವರ ಹೇಳಿಕೆಯನ್ನು ಬಿಜೆಪಿ ತುಂಬಾ ಅಪಕ್ವ ಎಂದು ಲೇವಡಿ ಮಾಡಿದೆ. ಬೆಳೆಯುತ್ತಿರುವ ಮಕ್ಕಳಲ್ಲಿ ಉಗ್ರವಾದವನ್ನು ತುಂಬಲು ಬೆಂಬಲ ನೀಡುವ ಮೂಲಕ ಶಿಕ್ಷಣ ಸಚಿವರು ಮುಸ್ಲಿಂ ಲೀಗ್‍ನ ಕೆಲಸವನ್ನು ಬೆಂಬಲಿಸುತ್ತಿದ್ದಾರೆ ಎಂದು ಬಿಜೆಪಿ ಕುಂಬಳೆ ಮಂಡಲ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.




