ಬದಿಯಡ್ಕ : ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿ ಬೃಹತ್ ಸಮಾವೇಶ ಹಾಗೂ ರಜತಶಂಕರ ಗೌರವಾಭಿನಂದನೆ ಅಕ್ಟೋಬರ್ 5ರಂದು(ಇಂದು) ಬೇಳ ವಿಷ್ಣುಮೂರ್ತಿ ನಗರದಲ್ಲಿರುವ ವಿ.ಎಂ.ಆಡಿಟೋರಿಯಂನಲ್ಲಿ ಬೆಳಗ್ಗೆ 9.30ಕ್ಕೆ ನಡೆಯಲಿದೆ.
ಬೆಳಗ್ಗೆ 9ಕ್ಕೆ ನೀರ್ಚಾಲು ಪೇಟೆಯಿಂದ ಡಿ.ಶಂಕರ ಅವರನ್ನು ತೆರದ ವಾಹನದಲ್ಲಿ ಮೆರವಣಿಗೆಯ ಮೂಲಕ ಸಭಾಂಗಣಕ್ಕೆ ಬರಮಾಡಿಕೊಳ್ಳುವುದು, 9.30ಕ್ಕೆ ಧ್ವಜಾರೋಹಣ ಧಾರ್ಮಿಕ ಮುಂದಾಳು ಬಾಬು ಪಚ್ಲಂಪಾರೆ ಇವರಿಂದ, ಸಭಾಕಾರ್ಯಕ್ರಮವನ್ನು ವಿಶ್ವಹಿಂದೂಪರಿಷತ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಇವರ ಅಧ್ಯಕ್ಷತೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಉದ್ಘಾಟಿಸಲಿದ್ದಾರೆ. ಮಾಜಿ ಸಂಸದ, ಕರ್ನಾಟಕ ರಾಜ್ಯ ನಿಕಟಪೂರ್ವ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರಮುಖರಾದ ಕೆ.ಶ್ರೀಕಾಂತ್, ಅಶ್ವಿನಿ ಎಂ.ಎಲ್., ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ರವೀಶ ತಂತ್ರಿ ಕುಂಟಾರು, ರಾಮಪ್ಪ ಮಂಜೇಶ್ವರ, ಎಂ.ಸುಧಾಮ ಗೋಸಾಡ, ಸುನಿಲ್ ಪಿ.ಆರ್., ಗೋಪಾಲಕೃಷ್ಣ ಮುಂಡೋಳುಮೂಲೆ ಸಹಿತ ಪಕ್ಷದ ಜಿಲ್ಲಾ, ಮಂಡಲ, ವಲಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.





