HEALTH TIPS

ಗಾಂಧೀಜಿಯವರ ಆಶಯಗಳನ್ನು ಮಾದರಿಯಾಗಿಸಬೇಕು ; ನಗರಸಭೆ ಅಧ್ಯಕ್ಷೆ ಕೆ. ವಿ.ಸುಜಾತ-ಗಾಂಧಿ ಜಯಂತಿ ವಾರಾಚರಣೆ ಜಿಲ್ಲಾ ಮಟ್ಟದ ಉದ್ಘಾಟನೆ

ಕಾಸರಗೋಡು: ನನ್ನ ಜೀವನವೇ ನನ್ನ ಸಂದೇಶ ಎಂದು ಹೇಳಿದ ಮಹಾತ್ಮ ಗಾಂಧಿಯವರ ಆಶಯವನ್ನು ಮಾದರಿಯಾಗಿಟ್ಟುಕೊಳ್ಳುದರೊಂದಿಗೆ ಅಸ್ಪೃಷ್ಯತೆ ಹೋಗಲಾಡಿಸುವಿಕೆ,ಪರಿಸರ ಸಂರಕ್ಷಣೆ, ಮಾದಕ ವ್ಯಸನ ವಿರೋಧ ಮುಂತಾದ ಮೌಲ್ಯಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಕಾಞoಗಡ್ ನಗರಸಭಾ ಅಧ್ಯಕ್ಷೆ ಕೆ. ವಿ. ಸುಜಾತ ಹೇಳಿದರು.

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಮಾಹಿತಿ ಕಚೇರಿಯ ವತಿಯಿಂದ ಕಾಞoಗಡ್ ನ ಮೆಲಾಂಕೋಟ್ ಎ. ಸಿ ಕಣ್ಣನ್ ನಾಯರ್ ಸ್ಮಾರಕ ಸರ್ಕಾರಿ ಯು. ಪಿ.ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಗಾಂಧೀ ಜಯಂತಿ ಸಪ್ತಾಹ ಕಾರ್ಯಕ್ರಮವನ್ನು ನಗರಸಭಾ ಅಧ್ಯಕ್ಷರು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಲೇಖಕರು ಮತ್ತು ಕಣ್ಣೂರು ವಿಶ್ವವಿದ್ಯಾಲಯದ ಮಾಜಿ ಪರೀಕ್ಷಾ ನಿಯಂತ್ರಕ ಪ್ರೊ. ಕೆ. ಪಿ. ಜಯರಾಜನ್ ಮುಖ್ಯ ಭಾಷಣೆಯನ್ನು ಮಾಡಿದರು.

ಧರ್ಮಗಳ ನಡುವಿನ ಏಕತೆ ಮತ್ತು ಜಾತ್ಯಾತೀತತೆಯನ್ನು ಗಾಂಧೀಯವರು ಕಲ್ಪಿಸಿದ್ದರು. ನಮ್ಮ ರಾಷ್ಟ್ರಪಿತರು ಶತ್ರು -ಮಿತ್ರ ಬೇಧಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ಕಂಡ ವ್ಯಕ್ತಿ ಎಂದು ಅವರು ಹೇಳಿದರು.ಅಹಿಂಸೆಯ ಮಹಾನ್ ಸಂದೇಶವನ್ನು ಗಾಂಧೀಜಿಯವರು ಜಗತ್ತಿಗೆ ಸಾರಿದ್ದಾರೆ. ಮತ್ತು 112 ದೇಶಗಳು ಗಾಂಧಿಯವರ ನೆನಪಿಗಾಗಿ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿವೆ ಎಂದು ಅವರು ನೆನಪಿಸಿದರು.ಗಾಂಧೀಜಿಯವರ ಹತ್ಯೆಯಾದ ದಿನದಂದು ವಿಶ್ವ ಸಂಸ್ಥೆಯು ಮೊದಲ ಬಾರಿಗೆ ತನ್ನ ಧ್ವಜವನ್ನು ಅರ್ಧಕ್ಕೆ ಇಳಿಸಿತ್ತು.

ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ರಾಜ್ಯ ಗ್ರಂಥಾಲಯ ಮಂಡಳಿಯ ಮಾಜಿ ಕಾರ್ಯದರ್ಶಿ ಅಡ್ವೋಕೇಟ್ ಪಿ. ಅಪ್ಪುಕುಟ್ಟನ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಕೆ. ವಿ. ನಾರಾಯಣನ್, ಸಾಂಸ್ಕøತಿಕ ಪ್ರವರ್ತಕ ಕೆ. ಪ್ರಸೇನನ್ ಸಿಬ್ಬಂದಿ ಕಾರ್ಯದರ್ಶಿ ಪಿ. ಶ್ರೀಕಲಾ, ಎಂ. ಪಿ. ಟಿ. ಎ ಅಧ್ಯಕ್ಷೆ ರೀಜಾ, ಮತ್ತಿತರರು ಮಾತನಾಡಿದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂಧನನ್ ಸ್ವಾಗತಿಸಿದರು. ಮತ್ತು ಜಿಲ್ಲಾ ಮಾಹಿತಿ ಕಚೇರಿಯ ಸಹಾಯಕ ಸಂಪಾದಕಿ ಎ. ಪಿ. ದಿಲ್ನಾ ಕಾರ್ಯಕ್ರಮಕ್ಕೆ ವಂದಿಸಿದರು.

ಬಾಲನ್ ನೀಲೇಶ್ವರಂ ಅವರ ' ವಿಸ್ಮಯ ' ಮ್ಯಾಜಿಕ್ ಶೋ ನಡೆಯಿತು. ಜ್ಞಾನ,ಮನರಂಜನೆ, ಮತ್ತು ವಿಸ್ಮಯ ಒಗ್ಗೂಡಿದಾಗ ಅದು ಮಕ್ಕಳಿಗೆ ಹೊಸ ಅನುಭವವಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries