HEALTH TIPS

ಪುರಾತತ್ವ, ಪ್ರಾಚ್ಯವಸ್ತುಗಳು ಮತ್ತು ವಸ್ತು ಸಂಗ್ರಹಾಲಯಗಳ ಇಲಾಖೆಗಳ 'ವಿಷನ್ 2031'; ರಾಜ್ಯ ಮಟ್ಟದ ವಿಚಾರ ಸಂಕಿರಣ; ಸಂಘಟನಾ ಸಮಿತಿ ರಚನೆ

ಕಾಸರಗೋಡು: 2031 ರಲ್ಲಿ ಕೇರಳ ರಾಜ್ಯ ರಚನೆಯ 75 ನೇ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ನೇತೃತ್ವದಲ್ಲಿ ವಿಷನ್ 2031 ಹೆಸರಿನಲ್ಲಿ ಸರ್ಕಾರವು ರಾಜ್ಯದ ವಿವಿಧ ಭಾಗಗಳಲ್ಲಿ 33 ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ರಾಜ್ಯವು ಮಾಡಿದ ಸಾಧನೆಗಳನ್ನು ಮೌಲ್ಯಮಾಪನ ಮಾಡಲು ಮತ್ತು ಭವಿಷ್ಯದ ಅಭಿವೃದ್ಧಿ ಗುರಿಗಳನ್ನು ಯೋಜಿಸಲು ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗುತ್ತಿದೆ. ಅಕ್ಟೋಬರ್ 17 ರಂದು ಕಾಞಂಗಾಡ್‍ನಲ್ಲಿ ನಡೆಯಲಿರುವ ಪುರಾತತ್ವ, ಪ್ರಾಚ್ಯವಸ್ತುಗಳು ಮತ್ತು ವಸ್ತು ಸಂಗ್ರಹಾಲಯಗಳ ಇಲಾಖೆಗಳ ವಿಷನ್ 2031 ವಿಚಾರ ಸಂಕಿರಣವನ್ನು ಯಶಸ್ವಿಗೊಳಿಸಲು ಸಂಘಟನಾ ಸಮಿತಿಯನ್ನು ರಚಿಸಲಾಗಿದೆ.

ಕಾಞಂಗಾಡ್ ನಗರಸಭೆ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕೆ. ಲತಾ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡ್ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಸಂಘಟನಾ ಸಮಿತಿಯ ರಚನೆ ಸಭೆಯನ್ನು ನಗರಸಭೆಯ ಅಧ್ಯಕ್ಷೆ ಕೆ. ವಿ. ಸುಜಾತ ಉದ್ಘಾಟಿಸಿದರು. ಕೇರಳ ಪೂರಕ್ಕಳಿ ಅಕಾಡೆಮಿ ಅಧ್ಯಕ್ಷ, ಮಾಜಿ ಶಾಸಕ ಕೆ.ಕುಂಞÂ್ಞ ರಾಮನ್, ಮ್ಯೂಸಿಯಂ ಮತ್ತು ಮೃಗಾಲಯದ ನಿರ್ದೇಶಕಿ ಮಂಜುಳಾದೇವಿ, ಪುರಾತತ್ವ ಇಲಾಖೆ ನಿರ್ದೇಶಕ ಪಿ.ಎಸ್. ಪಾರ್ವತಿ ಎಸ್, ಪೆÇ್ರ.ಕೆ.ಪಿ.ಜಯರಾಜನ್, ಡಾ.ಸಿ.ಬಾಲನ್, ಫಾಕ್ಲ್ಯಾಂಡ್ ಅಧ್ಯಕ್ಷ ಅಡ್. ವಿ.ಜಯರಾಜನ್, ಹೊಸದುರ್ಗ ತಹಸೀಲ್ದಾರ್ ಜಿ.ಸುರೇಶ್ ಬಾಬು, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂಧನ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಅನೀಸನ್, ಕೆ.ವಿ. ಸರಸ್ವತಿ, ಎ.ಪ್ರಭಾವತಿ, ನಗರಸಭಾ ಸದಸ್ಯರಾದ ಶೋಕ್ಕುಮಾರ್, ರಾಧಾಕೃಷ್ಣನ್ ಪಳ್ಳಿಕೆ ಮಾತನಾಡಿದರು. ಪುರಾತತ್ವ ಇಲಾಖೆ ನಿರ್ದೇಶಕ ಇ.ದಿನೇಶನ್ ಸ್ವಾಗತಿಸಿ, ಟಿ.ವಿ.ಅನಿಲಕುಮಾರ್ ವಂದಿಸಿದರು. 

ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು: ಮುಖ್ಯ ಪೋಷಕ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪೋಷಕರು: ನೋಂದಣಿ, ಪುರಾತತ್ವ, ಆರ್ಕೈವ್ಸ್ ಮತ್ತು ವಸ್ತುಸಂಗ್ರಹಾಲಯಗಳ ಸಚಿವ ರಾಮಚಂದ್ರನ್ ಕಡನ್ನಪ್ಪಳ್ಳಿ, ಅರಣ್ಯ ಮತ್ತು ವನ್ಯಜೀವಿ ಸಚಿವ ಎ.ಕೆ. ಸಂಸದ ಎ.ಕೆ.ಶಶೀಂದ್ರನ್, ಸಂಸದ ರಾಜಮೋಹನ್ ಉಣ್ಣಿತ್ತಾನ್, ಎಂ.ರಾಜಗೋಪಾಲನ್, ಸಿ.ಎಚ್. ಕುಂಞಂಬು, ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ , ಬೇಬಿ ಬಾಲಕೃಷ್ಣನ್, ಸಂಘಟನಾ ಅಧ್ಯಕ್ಷ ಇ.ಚಂದ್ರಶೇಖರನ್, ಉಪಾಧ್ಯಕ್ಷ-ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ. ಸುಜಾತಾ, ಪ್ರಧಾನ ಸಂಚಾಲಕಿ: ಪುರಾತತ್ವ ಇಲಾಖೆ ನಿರ್ದೇಶಕ ಇ.ದಿನೇಶನ್, ಸಂಚಾಲಕರು: ಮ್ಯೂಸಿಯಂ ಮೃಗಾಲಯದ ನಿರ್ದೇಶಕಿ ಮಂಜುಳಾ ದೇವಿ, ಪುರಾತತ್ವ ಇಲಾಖೆ ನಿರ್ದೇಶಕಿ ಪಿ.ಎಸ್. ಪಾರ್ವತಿ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries