ಕಾಸರಗೋಡು: ಸಾಮಾಜಿಕ ಜಾಲದ ಮೂಲಕ ಶೇರ್‍ಮಾರ್ಕೆಟ್‍ಗೆ ಸಂಬಂಧಿಸಿದ ತರಗತಿ ನಡೆಸಿ, ಇದಕ್ಕಾಗಿ ವಿವಿಧ ನೆಪವೊಡ್ಡಿ ವಲಿಯಪರಂಬ ಇಡಯಿಲಕ್ಕಾಡಿನ ವ್ಯಕ್ತಿಯೊಬ್ಬರಿಂದ 20.13ಲಕ್ಷ ರೂ. ಪಡೆದು ವಂಚಿಸಿದ ಆಲಪ್ಪುಳ ಕಾರೂರ್ ನಿವಾಸಿ ಜಿ. ಬಿಜುಕುಮಾರ್‍ಎಂಬಾತನನ್ನು ಕಾಸರಗೋಡು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತ ವಂಚಿಸಿದ ಮೊತ್ತದಲ್ಲಿ ಮೂರು ಲಕ್ಷ ರೂ. ಈತನ ಮಾಲಿಕತ್ವದ ಸಂಸ್ಥೆಯೊಂದರ ಹೆಸರಿನ ಆಲಪ್ಪುಳದ ಖಾಸಗಿ ಬ್ಯಾಂಕ್‍ಗೆ ಪಾವತಿಯಾಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಐಬಿಪಿಐ ಎಂಬ ಆನ್‍ಲೈನ್ ಆ್ಯಪ್ ಮೂಲಕ ಶೇರ್ ಟ್ರೇಡಿಂಗ್ ನಡೆಸುವ ಸಂಸ್ಥೆ ಹೆಸರಲ್ಲಿ ಹಲವರಿಂದ ಹಣ ಪಡೆದು ವಂಚಿಸಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭರತ್ ರೆಡ್ಡಿ ಅವರ ನಿರ್ದೇಶ ಪ್ರಕಾರ ಕಾಸರಗೋಡು ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಉಸ್ತುವಾರಿಯಲ್ಲಿರುವ ಯು.ಪಿ ವಿಪಿನ್, ಎಸ್.ಐ ರವೀಂದ್ರನ್ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು, ಇತರರಿಗಾಗಿ ಹುಡುಕಾಟ ನಡೆಯುತ್ತಿದೆ.




