ಮಧೂರು: ರಾಮದಾಸ ನಗರದಲ್ಲಿರುವ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ ವತಿಯಿಂದ ಕೇಂದ್ರದ 25ನೇ ವರ್ಷದ ಅಂಗವಾಗಿ "ರಜತ ರಂಗ" ಉದ್ಘಾಟನಾ ಸಮಾರಂಭ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳು ಹಾಗೂ ಕೊಂಡೆವೂರು ಮಠಾಧೀಶ ಶ್ರೀ ಯೋಗಾನಂದ ಸರಸ್ವತೀ ಶ್ರೀಗಳ ಶುಭಾಶೀರ್ವಾದದೊಂದಿಗೆ ಸೋಮವಾರ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು. ಬೆಳಿಗ್ಗೆ 10ಕ್ಕೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕುತ್ಯಾಳ ಶ್ರೀ ಕ್ಷೇತ್ರ ಮೊಕ್ತೇಸರ ಕೆ.ಜಿ. ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜನಾರ್ದನ ನಾಯ್ಕ ಸಿ.ಎಚ್. ಉದ್ಘಾಟಿಸಿದರು. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಹರಿಕಿರಣ್ ಬಂಗೇರ, ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಮಯ್ಯ ಹಾಗೂ ತರಬೇತಿ ಕೇಂದ್ರದ ಅಧ್ಯಕ್ಷ ಚಂದ್ರ ಮೋಹನ್ ಕೂಡ್ಲು ಮತ್ತು ಕೆ.ಕೆ. ಶ್ಯಾನುಭಾಗ್, ಶಿವಶಂಕರ ಬಲಿಪ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಸತ್ಯನಾರಾಯಣ ತಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸವಿತಾ ಟೀಚರ್ ವಂದಿಸಿದರು. ಗುರುರಾಜ ಹೊಳ್ಳ ಬಾಯಾರು ನಿರೂಪಿಸಿದರು. ಶಮಿತಾ ಪ್ರಾರ್ಥಿಸಿದರು.
ಕೀರ್ತಿಶೇಷರ ಸಂಸ್ಮರಣೆ:
ಸಮಾರಂಭದಲ್ಲಿ ಇಬ್ಬರು ಪ್ರಮುಖ ಕಲಾಪೋಷಕರು ಮತ್ತು ಕಲಾವಿದರನ್ನು ಸ್ಮರಿಸಲಾಯಿತು. ಕೀರ್ತಿಶೇಷ ಕೂಡ್ಲು ಸುಬ್ರಾಯ ಶ್ಯಾನುಭೋಗ್ ಅವರ ಸಂಸ್ಮರಣಾ ಭಾಷಣವನ್ನು ರಾಜೇಂದ್ರ ಬಜಕೂಡ್ಲು ನಡೆಸಿದರು. ಪತ್ರಕರ್ತ ವಿ.ಜಿ.ಕಾಸರಗೋಡು ಅವರು ಕೀರ್ತಿಶೇಷ ಹಿರಿಯ ಬಲಿಪ ನಾರಾಯಣ ಭಾಗವತರ ಸಂಸ್ಮರಣಾ ಭಾಷಣ ಮಾಡಿದರು. ಶಿವಶಂಕರ ಬಲಿಪ ಉಪಸ್ಥಿತರಿದ್ದರು.
ಸರಣಿ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ತಾಳಮದ್ದಳೆ:
ಸಭಾ ಕಾರ್ಯಕ್ರಮದ ಬಳಿಕ "ಜ್ವಾಲಾ ಪ್ರತಾಪ" (ಕವಿ: ಹೊಸತೋಟ ಮಂಜುನಾಥ ಭಾಗವತ) ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಶಿವಶಂಕರ ಬಲಿಪ(ಭಾಗವತಿಕೆ), ಚಂದ್ರಶೇಖರ ಭಟ್ ಕೊಂಕಣಾಜೆ, ಲಕ್ಷ್ಮೀಶ ಬೇಂಗ್ರೋಡಿ(ಚೆಂಡೆ-ಮದ್ದಳೆ), ಮುಮ್ಮೇಳದಲ್ಲಿ ಜಬ್ಬಾರ್ ಸಮೋ ಸಂಪಾಜೆ, ಗೋಪಾಲಕೃಷ್ಣ ನಾಯಕ್ ಸೂರಂಬೈಲು, ವೇಣುಗೋಪಾಲ ಶೇಣಿ, ಹರಿನಾರಾಯಣ ಮಯ್ಯ, ಗುರುರಾಜ ಹೊಳ್ಳ ಬಾಯಾರು, ಅಚ್ಯುತ ಬಲ್ಯಾಯ, ಸುರೇಶ ಮಣಿಯಾಣಿ ಪಾತ್ರಗಳನ್ನು ನಿರ್ವಹಿಸಿದರು.
ಯಕ್ಷಗಾನ ಬಯಲಾಟ:
ಅಪರಾಹ್ನ 3.00 ರಿಂದ ತರಬೇತಿ ಕೇಂದ್ರದ ಸದಸ್ಯರಿಂದ "ನರಕಾಸುರ ಮೋಕ್ಷ" ಪ್ರಸಂಗದ ಯಕ್ಷಗಾನ ಬಯಲಾಟ ತರಬೇತಿ ಕೇಂದ್ರದ ಸದಸ್ಯರಿಂದ ನಡೆಯಿತು. ಹಿಮ್ಮೇಳದಲ್ಲಿ ತಲ್ಪಣಾಜೆ ವೆಂಕಟ್ರಮಣ ಭಟ್, ರಾಂಪ್ರಸಾದ್ ಮಯ್ಯ ಕೂಡ್ಲು(ಭಾಗವತಿಕೆ), ಪೃಥ್ವಿ ಚಂದ್ರ ಪೆರ್ವಡಿ, ಲಕ್ಷ್ಮೀಶ ಬೆಂಗ್ರೋಡಿ(.ಚೆಂಡೆ-ಮದ್ದಳೆ)ಯಲ್ಲಿ ಸಹಕರಿಸಿದರು.ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾ ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ, ಅನ್ನಪೂರ್ಣೇಶ್ವರಿ ಭಜನಾ ಸಂಘ ಸಹಕಾರ ನೀಡಿದರು.




.jpg)
.jpg)
.jpg)
.jpg)
