ಕುಂಬಳೆ: ಮುಜುಂಗಾವು ಪರಿಸರದಲ್ಲಿರುವ ,ವಿದ್ಯಾಲಯದ ರಕ್ಷಕರೂ ಆದ ಚಂದ್ರಹಾಸ ಶೆಟ್ಟಿಯವರ ಮನೆಯ ಗೋಮಾತೆಗೆ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಗೋಪೂಜೆ ಬುಧವಾರ ನಡೆಯಿತು. ವಿದ್ಯಾಲಯದ ಆಡಳಿತ ಸೇವಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.
ಸಂಸ್ಕøತ ಅಧ್ಯಾಪಕ ಬಾಲಕೃಷ್ಣ ಶರ್ಮ ಅನಂತಪುರ ಗೋಪೂಜೆಯ ಮಹತ್ವವನ್ನು ಈ ಸಂದರ್ಭದಲ್ಲಿ ವಿವರಿಸಿದರು. ವಿದ್ಯಾಲಯದ ಆಡಳಿತ ಸೇವಾ ಸಮಿತಿ ಕಾರ್ಯದರ್ಶಿ ಸುಬ್ರಹ್ಮಣ್ಯ ಪ್ರಸಾದ್ ಹಿಳ್ಳೆಮನೆ, ಮುಖ್ಯೋಪಾಧ್ಯಾಯ ಶಾಮ ಭಟ್ ದರ್ಭೆಮಾರ್ಗ, ಸಹ ಮುಖ್ಯಶಿಕ್ಷಕಿ ಚಿತ್ರಾಸರಸ್ವತಿ ಪೆರಡಾನ ಸಹಿತ ಅಧ್ಯಾಪಕ ವೃಂದ ಹಾಗೂ ಶಾಲಾ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಗೋಪೂಜೆಯಲ್ಲಿ ಭಾಗಿಗಳಾಗಿದ್ದರು.




.jpg)
.jpg)
.jpg)
.jpg)
