ಕುಂಬಳೆ: ಚೇವಾರು ಪಟ್ಲ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಡಿ.25 ರಂದು ಶ್ರೀ ಅಯ್ಯಪ್ಪ ವಿಳಕ್ ಉತ್ಸವ ನಡೆಯಲಿರುವುದು. ಇದರ ಪೂರ್ವಸಿದ್ದತಾ ಸಭೆ ಮಂದಿರದಲ್ಲಿ ಭಾನುವಾರ ಜರಗಿತು. ಸಭೆಯಲ್ಲಿ ಉತ್ಸವದ ಆಮಂತ್ರಣ ಪತ್ರಿಕೆ ಮತ್ತು ನಿಧಿಕುಂಭವನ್ನು ಕಂಬಾರು ಶ್ರೀ ದುರ್ಗಾಪಮೇಶ್ವರಿ ದೇವಾಲಯದ ಆಡಳಿತ ಮೊಕ್ತೇಸರ ಬಾಡೂರು ಯಜಮಾನ ಕುಂಞಣ್ಣ ಭಂಡಾರಿ-ಗಿರಿಜಾ ಭಂಡಾರಿ ದಂಪತಿಗಳು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮರುವಳ ಗೋವಿಂದ ಭಟ್, ಉಪೇಂದ್ರ ಆಚಾರ್ಯ, ಡಾ.ಹರೀಶ್ ಬೊಟ್ಟಾರಿ, ಅಚ್ಯುತ ಚೇವಾರ್, ರವಿಶಂರ ಭಟ್ ಚೇವಾರು, ಪ್ರಸಾದ್ ರೈ ಕಯ್ಯಾರು, ಪುಷ್ಪಾ ಕಮಾಲಾಕ್ಷ, ರಘು ಕಲ್ಕಾರ್, ಚೆನ್ನಪ್ಪ ಕುಲಾಲ್, ಇ.ಎಸ್. ಸುಬ್ರಹ್ಮಣ್ಯ ಭಟ್, ರಾಜೀವಿ ಶೆಟ್ಟಿಗಾರ್, ಕೃಷ್ಣ ನಾಯಕ್, ಮೋಹನ ಪೆರಿಯಪ್ಪಾಡಿ, ಅರುಣ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ರವಿಶಂಕರ್ ಚೇವಾರು ಸ್ವಾಗತಿಸಿ, ಯು.ಎಂ.ಗೋಪಾಲಕೃಷ್ಣ ಭಟ್ ವಂದಿಸಿದರು.




.jpg)
