ಬದಿಯಡ್ಕ: ಒಂದೇ ಕ್ಷೇತ್ರದಲ್ಲಿ ಅನೇಕ ವರ್ಷಗಳ ಕಾಲ ಶಾಸಕರು, ಸಂಸದರು, ಸ್ಪೀಕರ್, ವಿಧಾನಪರಿಷತ್ ಸದಸ್ಯರಾದ ಅನೇಕರನ್ನು ನೋಡಿದ್ದೇನೆ. ಆದರೆ ಬಹಳ ಕಷ್ಟ ಮತ್ತು ಕಠಿಣವಾದ ಪಂಚಾಯಿತಿನಲ್ಲಿ ಸತತ 25 ವರ್ಷಗಳ ಕಾಲ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಶಂಕರ ಅವರ ಸಾಧನೆ ನಿಜಕ್ಕೂ ಅಭಿನಂದನಾರ್ಹವಾಗಿದೆ. ಆರೆಸ್ಸೆಸ್ 100 ವಿಜಯದಶಮಿಗಳನ್ನು ಕಂಡ ಈ ಸಂದರ್ಭದಲ್ಲಿ ಬಿಜೆಪಿ ಜಗತ್ತಿನ ಅತಿದೊಡ್ಡ ಪಕ್ಷವಾಗಿದೆ. ಸಾವಿರಾರು ಸಾಮಾನ್ಯ ಕಾರ್ಯಕರ್ತರು ಅಧಿಕಾರವನ್ನು ಹೊಂದದೆ ಪಕ್ಷಕ್ಕಾಗಿ ರಕ್ತವನ್ನು ಬೆವರು ಮಾಡಿ ಸುರಿಸಿ ಕೆಲಸವನ್ನು ಮಾಡಿದ ಹಿರಿಯ ಕಾರ್ಯಕರ್ತರ ಪರಿಶ್ರಮದಿಂದ ಬಿಜೆಪಿ ಇಂದು ಈ ದೇಶದಲ್ಲಿ ಪ್ರಧಾನಿಯನ್ನು ಹೊಂದಿದೆ. ಅನೇಕ ಸವಾಲುಗಳನ್ನು ಎದುರಿಸಿ ಕೇರಳದಲ್ಲಿ ಬಿಜೆಪಿ ಬೆಳೆಯುತ್ತಾ ಬರುತ್ತಿದೆ. ಹಿರಿಯರ ಆದರ್ಶ, ಹೋರಾಟಗಳು ಇಂದು ನಮ್ಮ ಪಕ್ಷವನ್ನು ಬಲುದೊಡ್ಡ ಪಕ್ಷವನ್ನಾಗಿಸಿದೆ. ಮುಂದಿನ ದಿನಗಳಲ್ಲಿ ಭಾರತದ ಇತಿಹಾಸ ನರೇಂದ್ರಮೋದಿ ಆಡಳಿತದ ಮೊದಲು ಮತ್ತು ನಂತರ ಎಂದು ಬದಲಾಗಬಹುದು. ಜಗತ್ತು ಭಾರತದತ್ತ ತಿರುಗಿನೋಡಲು ನರೇಂದ್ರ ಮೋದಿ ಕಾರಣ ಎಂದರು.
ನೀರ್ಚಾಲಿನಲ್ಲಿ ಜರಗಿದ `ರಜತ ಶಂಕರ' ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.




