HEALTH TIPS

ಅಗಲಿದ ತೆಂಕುತಿಟ್ಟಿನ ಖ್ಯಾತ ಭಾಗವತ ರಸರಾಗ ಚಕ್ರವರ್ತಿ ದಿನೇಶ ಅಮ್ಮಣ್ಣಾಯರಿಗೆ ಅ.28 ರಂದು ಶ್ರೀ ಎಡನೀರು ಮಠದಲ್ಲಿ ಸಾವಿರದ ಗಾನಕೋಗಿಲೆಗೆ ಸಾವಿರದ ಗೌರವ

ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಅನುಗ್ರಹದೊಂದಿಗೆ ರಸರಾಗ ಚಕ್ರವರ್ತಿ ದಿನೇಶ ಅಮ್ಮಣ್ಣಾಯ ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾವ ಭಾಗವತ ಸಾವಿರದ ಗಾನಕೋಗಿಲೆಗೆ ಸಾವಿರದ ಗೌರವ ಅ. 28 ರಂದು ಮಂಗಳವಾರ ಬೆಳಗ್ಗೆ 9.30 ರಿಂದ ರಾತ್ರಿ 9.30ರ ತನಕ ಜರಗಲಿದೆ. ಬೆಳಗ್ಗೆ 9.30 ರಿಂದ ಯಕ್ಷಗಾನದ ಖ್ಯಾತ ಹಿರಿಯ ಕಿರಿಯ ಹಿಮ್ಮೇಳ ಕಲಾವಿದರಿಂದ ಗಾನ ಗೌರವ. 10.25ರ ತನಕ ಪ್ರಫುಲ್ಲಚಂದ್ರ ನೆಲ್ಯಾಡಿ, ಚಿನ್ಮಯ ಭಟ್ ಕಲ್ಲಡ್ಕ, 10.30ರಿಂದ 12ರ ತನಕ ರಾಘವೇಂದ್ರ ಮಯ್ಯ, ಸತ್ಯನಾರಾಯಣ ಪುಣಿಚಿತ್ತಾಯ ಹಾಗೂ ಕಾವ್ಯಶ್ರೀ ಅಜೇರು, ಮಧ್ಯಾಹ್ನ 1.05ರಿಂದ 1ರ ತನಕ ರಾಮಕೃಷ್ಣ ಮಯ್ಯ ಹಾಗೂ ಹೊಸಮೂಲೆ ಗಣೇಶ್ ಭಟ್ ಭಾಗವತಿಕೆಯಲ್ಲಿ ಹಾಗೂ ಚೆಂಡೆ ಮದ್ದಳೆಯಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಜಯರಾಮ ಭಟ್ ಪಿ.ಟಿ., ಕೃಷ್ಣ ಪ್ರಕಾಶ ಉಳಿತ್ತಾಯ, ಗುರುಪ್ರಸಾದ್ ಬೊಳಿಂಜಡ್ಕ, ಲವಕುಮಾರ ಐಲ, ಶಶಿ ಆಚಾರ್ಯ ಉಡುಪಿ, ಕಾರ್ತಿಕ್ ಧಾರೇಶ್ವರ, ಶ್ರೀಧರ ವಿಟ್ಲ, ಕೌಶಿಕ್ ರಾವ್ ಪುತ್ತಿಗೆ, ಕೌಶಲ್ ರಾವ್ ಪುತ್ತಿಗೆ ಜೊತೆಗೂಡಲಿದ್ದಾರೆ. ಮುರಾರಿ ಭಟ್ ಪಂಜಿಗದ್ದೆ ಚಕ್ರತಾಳದಲ್ಲಿ ಹಾಗೂ ಹರೀಶ ಬಳಂತಿಮೊಗರು ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ. 

ನುಡಿ ಗೌರವ :

ಅಪರಾಹ್ನ 2.30 ರಿಂದ 5ರ ತನಕ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನಗಳೊಂದಿಗೆ ನಡೆಯುವ ನುಡಿ ಗೌರವ ಕಾರ್ಯಕ್ರಮವನ್ನು ಖ್ಯಾತ ವೈದ್ಯ, ಸಾಹಿತಿ ಹಿರಿಯ ಯಕ್ಷಗಾನ ಅರ್ಥಧಾರಿ ಡಾ. ರಮಾನಂದ ಬನಾರಿ ಉದ್ಘಾಟಿಸಲಿರುವರು. ಬಹುಶ್ರುತ ವಿದ್ವಾಂಸ ಹಿರಿಯ ಯಕ್ಷಗಾನ ಅರ್ಥದಾರಿ ಡಾ. ಪ್ರಭಾಕರ ಜೋಷಿ ಅಧ್ಯಕ್ಷತೆ ವಹಿಸಲಿರುವರು. ಸಾಮಾಜಿಕ ಸಾಂಸ್ಕøತಿಕ ಧುರೀಣ ಪ್ರದೀಪ್ ಕುಮಾರ್ ಕಲ್ಕೂರ ಮುಖ್ಯ ಅಭ್ಯಾಗತರಾಗಿರುವರು. ಕಟೀಲು ಸಪ್ತಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ತೆಂಕುತಿಟ್ಟಿನ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ, ಹಿರಿಯ ಹಿಮ್ಮೆಳ ವಾದಕ ಪದ್ಯಾಣ ಶಂಕರನಾರಾಯಣ ಭಟ್ ಗೌರವ ಉಪಸ್ಥಿತರಿರುವರು. ಹಿರಿಯ ಯಕ್ಷಗಾನ ಕಲಾವಿದ ಎಂ.ಎಲ್.ಸಾಮಗ, ರಂಗಕರ್ಮಿ ಕಾಸರಗೋಡು ಚಿನ್ನಾ, ಹಿರಿಯ ಯಕ್ಷಗಾನ ಅರ್ಥದಾರಿ ಉಜಿರೆ ಅಶೋಕ ಭಟ್, ಹಿರಿಯ ಸಂಗೀತ ವಿದ್ವಾಂಸ ವಿಠಲ ರಾಮ ಮೂರ್ತಿ, ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ ಶೆಟ್ಟಿ, ಖ್ಯಾತ ಯಕ್ಷಗಾನ ಅರ್ಥಧಾರಿಗಳಾದ ಜಬ್ಬಾರ್ ಸಮೋ ಸಂಪಾಜೆ, ಹಿರಿಯ ಕಲಾವಿದರುಗಳಾದ ಸಂಜಯ ಕುಮಾರ್ ಗೋಣಿಬೀಡು, ಸರಪಾಡಿ ಅಶೋಕ ಶೆಟ್ಟಿ, ವಾಸುದೇವ ರಂಗಾ ಭಟ್, ಡಿ.ಮನೋಹರ ಕುಮಾರ್ ನುಡಿಗೌರವ ಸಲ್ಲಿಸಲಿದ್ದಾರೆ. ಶ್ರೀ ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಧಾರ್ಮಿಕ ಮುಂದಾಳು ಕೆಯ್ಯೂರು ನಾರಾಯಣ ಭಟ್, ಖ್ಯಾತ ಯಕ್ಷಗಾನ ಕಲಾವಿದ ವಾದಿರಾಜ ಕಲ್ಲೂರಾಯ ನಿರ್ವಹಿಸುವರು. 

ಯಕ್ಷಗೌರವ :

ಸಂಜೆ 5.30 ರಿಂದ 9.30ರ ತನಕ ಯಕ್ಷಗಾನದ ಖ್ಯಾತ ಹಿರಿಯ ಕಿರಿಯ ಕಲಾವಿದರಿಂದ ಯಕ್ಷಗಾನ ಬಯಲಾಟ ಅಕ್ಷಯಾಂಬರ ವಿಲಾಸ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಸತೀಶ್ ಶೆಟ್ಟಿ ಪಟ್ಲ, ರವಿಚಂದ್ರ ಕನ್ನಡಿಕಟ್ಟೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪದ್ಮನಾಭ ಉಪಾಧ್ಯಾಯ, ಚೈತನ್ಯಕೃಷ್ಣ ಪದ್ಯಾಣ, ನಿಶ್ವತ್ ಜೋಗಿ ಜೊತೆಗೂಡಲಿದ್ದಾರೆ. ಪ್ರಸಿದ್ಧ ಕಲಾವಿದರು ಮುಮ್ಮೇಳದಲ್ಲಿ ತಮ್ಮ ಪಾತ್ರ ನಿರ್ವಹಣೆ ಮಾಡಲಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries