HEALTH TIPS

ಪಿಂಚಣಿದಾರರಿಗೆ ಭರ್ಜರಿ ಸಿಹಿ ಸುದ್ದಿ: ಮಾಸಿಕ ಪಿಂಚಣಿ ₹7,500ಕ್ಕೆ ಏರಿಕೆ..!

ನವದೆಹಲಿ: ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದಿಂದ ತತ್ತರಿಸಿರುವ ಪಿಂಚಣಿದಾರರಿಗೆ ಸರ್ಕಾರದಿಂದ ಸಂತಸದ ಸುದ್ದಿ ಸಿಕ್ಕಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಕನಿಷ್ಠ ಮಾಸಿಕ ಪಿಂಚಣಿ ಮೊತ್ತವನ್ನು ₹1,000ರಿಂದ ₹7,500ಕ್ಕೆ ಹೆಚ್ಚಿಸುವ ಕುರಿತು ಚಿಂತನೆ ನಡೆಸುತ್ತಿದೆ.

ಇತ್ತೀಚೆಗೆ ನಡೆದ ಕೇಂದ್ರ ಟ್ರಸ್ಟಿಗಳ ಮಂಡಳಿ (CBT) ಸಭೆಯಲ್ಲಿ ಪಿಂಚಣಿದಾರರ ಜೀವನಮಟ್ಟ ಸುಧಾರಣೆಗೆ ಸಂಬಂಧಿ ಸಿದಂತೆ ಮಹತ್ವದ ಚರ್ಚೆ ನಡೆಯಿತು. ಈ ಸಭೆಯಲ್ಲಿ ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪು, ಪಿಂಚಣಿದಾರರ ಬೇಡಿಕೆ ಮತ್ತು ಹಣದುಬ್ಬರದ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆದಿದೆ.

ಪರಿಷ್ಕೃತ ಪಿಂಚಣಿ ಮೊತ್ತದ ಪ್ರಸ್ತಾವಿತ ಪಟ್ಟಿ

ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ನೌಕರರು ತಮ್ಮ ಸೇವಾವಧಿ ಮತ್ತು ಕೊಡುಗೆ ಮೊತ್ತದ ಆಧಾರದ ಮೇಲೆ ಹೊಸ ಪಿಂಚಣಿಯನ್ನು ಪಡೆಯುವ ಸಾಧ್ಯತೆ ಇದೆ.

₹1,800 20 ವರ್ಷ ₹7,500
₹3,600 25 ವರ್ಷ ₹10,500
₹4,500 30 ವರ್ಷ ₹12,500
₹5,000 ಮತ್ತು ಹೆಚ್ಚು 35 ವರ್ಷ + ₹15,000

ಸರ್ಕಾರದ ಪಾಲುದಾರಿಕೆ

ಕಾರ್ಮಿಕ ಸಚಿವಾಲಯದ ಮೂಲಗಳ ಪ್ರಕಾರ, ಈ ಪರಿಷ್ಕೃತ ಪಿಂಚಣಿ ಮೊತ್ತವನ್ನು ಇಪಿಎಫ್‌ಒ ಮೀಸಲು ನಿಧಿ ಹಾಗೂ ಕೇಂದ್ರ ಸರ್ಕಾರದ ನೆರವಿನ ಸಹಭಾಗಿತ್ವದಲ್ಲಿ ಪಾವತಿಸುವ ಯೋಜನೆ ಇದೆ. ಈ ಕ್ರಮದಿಂದ ಸರ್ಕಾರಕ್ಕೆ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚವಾಗುವ ಸಾಧ್ಯತೆ ಇದೆ.

ಯಾರಿಗೆ ಲಾಭ?

ಸರ್ಕಾರದ ನಿಯಮಾನುಸಾರ, ಪಿಂಚಣಿ ಮಿತಿಯ ಸೇವಾವಧಿಯನ್ನು ಪೂರ್ಣಗೊಳಿಸಿರುವ ಎಲ್ಲಾ ಇಪಿಎಸ್ ಸದಸ್ಯರು (EPS Members) ಈ ಪರಿಷ್ಕೃತ ಪಿಂಚಣಿಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಪಿಂಚಣಿದಾರರ ಬಹುಕಾಲದ ಬೇಡಿಕೆ ಈಡೇರಲು ಸರ್ಕಾರ ತೀರ್ಮಾನ ಕೈಗೊಂಡರೆ, ಲಕ್ಷಾಂತರ ನಿವೃತ್ತ ನೌಕರರಿಗೆ ಇದು ಮಹತ್ತರ ಆರ್ಥಿಕ ನೆಮ್ಮದಿ ತರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries