ನವದೆಹಲಿ: ರಷ್ಯಾದಿಂದ ಬೃಹತ್ ಪ್ರಮಾಣದಲ್ಲಿ ಕಚ್ಚಾತೈಲ ಖರೀದಿಸುತ್ತಿರುವ ಭಾರತ, ಆ ಮೂಲಕ ಉಕ್ರೇನ್ ಯುದ್ಧಕ್ಕೆ ಪರೋಕ್ಷ ಹಣಕಾಸು ಬೆಂಬಲ ಒದಗಿಸುತ್ತದೆ ಎಂದು ಅಮೆರಿಕ ಗಂಭೀರ ಆರೋಪ ಹೊರಿಸಿ, ಭಾರತದ ಮೇಲೆ ಹೆಚ್ಚುವರಿ ಸುಂಕಗಳನ್ನು ವಿಧಿಸಿತ್ತು. ಈ ಮೂಲಕ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಒತ್ತಡ ತಂತ್ರ ಅನುಸರಿಸಿತ್ತು.ಆದರೆ ರಾಷ್ಟ್ರೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಭಾರತ ಅಮೆರಿಕದಿಂದ ತೈಲ ಖರೀದಿಯನ್ನು ಮುಂದುವರೆಸಿದೆ.
ಆದ್ರೆ ಇದೀಗ ಡೊನಾಲ್ಡ್ ಟ್ರಂಪ್ ಹೇಳಿಕೆ ನಿಜವಾಯ್ತು ಅನ್ನೋ ಅನುಮಾನ ಕಾಡತೊಡಗಿದೆ. ಯಾಕಂದ್ರೆ ರಷ್ಯಾದ ರೋಸ್‌ನೆಫ್ಟ್ ಮತ್ತು ಲೈಕೋಯಿಲ್ ಕಂಪನಿಗಳಿಂದ ಭಾರತಕ್ಕೆ ತೈಲ ಖರೀದಿ ಸ್ಥಗಿತಗೊಂಡಿದೆ, ಎಂದು ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ (MRPL) ಮತ್ತು ಮಿತ್ತಲ್ ಎನರ್ಜಿ ಘೋಷಿಸಿವೆ.
ಈ ಮೂಲಕ ಭಾರತದ ರಷ್ಯಾದಿಂದ ತೈಲ ಆಮದು ಪ್ರಾಯೋಗಿಕವಾಗಿ ಸ್ಥಗಿತಗೊಂಡಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಹುತೇಕ ನಿಜವಾಗಿದೆ.ಅತಿ ಶೀಘ್ರ ಭಾರತದ ಜೊತೆ ವ್ಯಾಪಾರ ಒಪ್ಪಂದ: ಟ್ರಂಪ್ ಸೋಲ್: ಉಭಯ ದೇಶಗಳ ನಡುವಿನ ವ್ಯಾಪಾರಒಪ್ಪಂದಕುರಿತುಅಧಿಕಾರಿಗಳು,
ಸಚಿವರ ಮಟ್ಟದ ಮಾತುಕತೆ ಪ್ರಗತಿಯ ಲ್ಲಿರುವಾಗಲೇ, ಶೀಘ್ರವೇ ನಾವು ಭಾರತ ದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊ ಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಇದರಿಂದ, ಮುಂದಿನ ದಿನಗಳಲ್ಲಿ ಭಾರತೀಯ ತೈಲ ಮತ್ತು ಇಂಧನ ವಲಯದಲ್ಲಿ ತೀವ್ರ ಬದಲಾವಣೆಗಳು ಸಂಭವಿಸಬಹುದು.




