ಬದಿಯಡ್ಕ: ಸಕ್ರಿಯ ಸದಸ್ಯ ಬಾಲೃಷ್ಣ ಭಟ್ ಅವರ ಆಕಸ್ಮಿಕ ಮರಣಕ್ಕೆ ಕ್ಯಾಂಪ್ಕೋ ಸಂಸ್ಥೆಯು `ಸಾಂತ್ವನ' ಯೋಜನೆಯಡಿಯಲ್ಲಿ ನೀಡುತ್ತಿರುವ ಸಹಾಯ ಧನದ ಮೊತ್ತ ರೂ. ಐವತ್ತು ಸಾವಿರದ ಚೆಕ್‍ನ್ನು ಮೃತರ ಪತ್ನಿ ಶ್ಯಾಮಲಾ ಅವರಿಗೆ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಹಸ್ತಾಂತರಿಸಿದರು. ನಿರ್ದೇಶಕರಾದ ಪದ್ಮರಾಜ ಪಟ್ಟಾಜೆ, ಬದಿಯಡ್ಕ ಪ್ರಾಂತೀಯ ಪ್ರಬಂಧಕ ಚಂದ್ರ ಎಂ, ಬದಿಯಡ್ಕ ಶಾಖೆಯ ಪ್ರಬಂಧಕ ಶ್ಯಾಂ ಪ್ರಶಾಂತ ಬಿ, ನೀರ್ಚಾಲು ಶಾಖೆಯ ಪ್ರಬಂಧಕ ಗಣೇಶ್ ಪಿ ಹಾಗೂ ಬದಿಯಡ್ಕ ಶಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

.jpg)
