ಅಲ್ಬೇನಿಯಾ : ಇತ್ತೀಚೆಗಷ್ಟೇ ಭಾರೀ ಸದ್ದು ಮಾಡಿದ್ದ
ಅಲ್ಬೇನಿಯಾ (Albania) ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (Artificial intelligence) ಸಚಿವೆ ಡಿಯೆಲ್ಲಾ (Diella) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು ಬರ್ಲಿನ್'ನಲ್ಲಿ ನಡೆದ ಗ್ಲೋಬಲ್ ಡೈಲಾಗ್ (ಬಿಜಿಡಿ) ವೇದಿಕೆಯಲ್ಲಿ ಮಾತನಾಡಿದ ಅಲ್ಬೇನಿಯಾ ಪ್ರಧಾನಿ ಎಡಿ ರಾಮ (Edi Rama), ಮೊದಲ ಬಾರಿಗೆ ಡಿಯೆಲ್ಲಾ ಗರ್ಭಿಣಿಯಾಗಿದ್ದು 83 ಮಕ್ಕಳನ್ನು ಹೊಂದಲಿದ್ದಾಳೆ ಎಂದಿದ್ದಾರೆ.
ಈ ಮಕ್ಕಳು ಅಂದ್ರೆ ಸಹಾಯಕರು ಎಂದರ್ಥ ಎಂದು ಹೇಳಿರುವ ಅವರು, ಈ AI ಚಾಲಿತ ಸಹಾಯಕರು ಸಂಸತ್ತಿನಲ್ಲಿ ನಡೆಯುವ ಎಲ್ಲಾ ಚರ್ಚೆಗಳನ್ನು ರೆಕಾರ್ಡ್ ಮಾಡುತ್ತಾರೆ.ಯಾವುದೇ ಸದಸ್ಯ ತಪ್ಪಿಸಿಕೊಳ್ಳುವ ಚರ್ಚೆ ಅಥವಾ ವಿಷಯದ ಬಗ್ಗೆ ಶಾಸಕರಿಗೆ ಆ ನಂತರ ತಿಳಿಸುತ್ತಾರೆ ಎಂದು ರಾಮ ವಿವರಿಸಿದ್ದಾರೆ.
ಸಂಸತ್ತಿನ ಅಧಿವೇಶನಗಳಲ್ಲಿ ಭಾಗವಹಿಸುವ ಶಾಸಕರಿಗೆ ಈ ಮಕ್ಕಳು ಸಹಾಯಕರಾಗಿ ಸೇವೆ ಸಲ್ಲಿಸುತ್ತಾರೆ ಮತ್ತು ಚರ್ಚೆ ನಡೆಯುವ ಎಲ್ಲಾ ದಾಖಲೆಯನ್ನ ಸಂಗ್ರಹಿಸಿ ಶಾಸಕರಿಗೆ ಒದಗಿಸಲಿದೆ. ಹೀಗಾಗಿ ಈ ಸಹಾಯಕರನ್ನು AI ಸಚಿವೆಯ ಮಕ್ಕಳು ಎನ್ನಲಾಗಿದ್ದು, ಈ ಮಕ್ಕಳು ತಮ್ಮ ತಾಯಿಯ ಜ್ಞಾನವನ್ನ ಹೊಂದಿರುತ್ತಾರೆ ಎಂದು ರಾಮ ಹೇಳಿದ್ದಾರೆ.
ಅಲ್ಬೇನಿಯಾದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಈ ಡಿಯೆಲ್ಲಾ AI ಸಚಿವೆಯನ್ನು ಸೆಪ್ಟೆಂಬರ್‌ನಲ್ಲಿ ನೇಮಕ ಮಾಡಲಾಗಿತ್ತು. ಈ AI ಸಚಿವೆಯನ್ನ ಸಾಂಪ್ರದಾಯಿಕ ಅಲ್ಬೇನಿಯನ್ ಉಡುಪಿನಲ್ಲಿರುವ ಮಹಿಳೆಯಾಗಿ ತೋರಿಸಲಾಗಿದೆ. ಇದೀಗ ಈಕೆಯ ಮಕ್ಕಳು ಅಂದ್ರೆ ಇನ್ನಷ್ಟು ಸಹಾಯಕರು ಬರಲಿದ್ದಾರೆ ಎಂದು ಎಡಿ ರಾಮ ಹೇಳಿದ್ದಾರೆ.




