ಪ್ಯಾರಿಸ್: ಇಲ್ಲಿನ ವಿಶ್ವವಿಖ್ಯಾತ ಲೂವ್ರಾ ಮ್ಯೂಸಿಯಂನಲ್ಲಿನ ಅತ್ಯಮೂಲ್ಯ ವಸ್ತುಗಳನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ.
ಶಂಕಿತರಲ್ಲಿ ಒಬ್ಬರು ದೇಶ ಬಿಟ್ಟು ಹೋಗುತ್ತಿದ್ದಾಗ, ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪ್ಯಾರಿಸ್ ಪ್ರಾಸಿಕ್ಯೂಟರ್ ಭಾನುವಾರ ತಿಳಿಸಿದ್ದಾರೆ.
ಲೂವ್ರಾ ಮ್ಯೂಸಿಯಂನ ಮಹಡಿಯ ಕಿಟಕಿಗಳನ್ನು ಒಡೆದು ಅಕ್ಟೋಬರ್ 19ರಂದು ಒಳನುಸುಳಿದ್ದ ದರೋಡೆಕೋರರು, ಮೂರನೇ ನೆಪೊಲಿಯನ್ ಪತ್ನಿಯ ಕಿರೀಟ, ಆಭರಣಗಳು ಸೇರಿದಂತೆ 102 ಮಿಲಿಯನ್ ಡಾಲರ್ (₹895 ಕೋಟಿ) ಮೌಲ್ಯದ ಎಂಟು ವಸ್ತುಗಳನ್ನು ದರೋಡೆ ಮಾಡಿದ್ದರು.
ಅತೀ ಹೆಚ್ಚು ಜನರು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿರುವ ಲೂವ್ರಾ ಮ್ಯೂಸಿಯಂನಲ್ಲಿ ಭದ್ರತಾ ಲೋಪ ಸಂಭವಿಸಿರುವುದು ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.




