ಕಾಸರಗೋಡು: ಧಾರ್ಮಿಕ ನಂಬಿಕೆಗಳಿಗೆ ಬದ್ಧವಾಗಿ ರಾಜಕೀಯ ಚಟುವಟಿಕೆಗಳನ್ನು ನಡೆಸುವ ಸ್ವಾತಂತ್ರ್ಯವನ್ನು ಬಿಜೆಪಿ ನೀಡಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಉಪಾಧ್ಯಕ್ಷ ಶಾನ್ ಜಾರ್ಜ್ ತಿಳಿಸಿದ್ದಾರೆ. ಅವರು ವೆಳ್ಳರಿಕುಂಡ್‍ನಲ್ಲಿ ನಡೆದ ಪಕ್ಷದ ಸಾಮಾಜಿಕ ಸಂಪರ್ಕ ಜಿಲ್ಲಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೆ.ವಿ. ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಬಿಜೆಪಿ ಕೋಯಿಕ್ಕೋಡ್ ವಲಯ ಉಪಾಧ್ಯಕ್ಷ ಕೆ.ನಿತ್ಯಾನಂದನ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸುಕುಮಾರನ್ ಕಾಲಿಕಡವು, ಉತ್ತಮನ್, ವ್ಯಾಪಾರಿ ವ್ಯವಸಾಯಿ ಏಕೋಪನ್ ಸಮಿತಿ ವೆಳ್ಳರಿಕುಂಡು ಘಟಕದ ಅಧ್ಯಕ್ಷ ಥಾಮಸ್ ಚೆರಿಯನ್, ಲೈಸಮ್ಮ ಜಾನ್ ಮೊದಲದವರು ಉಪಸ್ಥಿತರಿದ್ದರು.


