ಕಾಸರಗೋಡು: ಮಲಬಾರ್ ದೇವಸ್ವಂ ನೌಕರರ ಸಂಘ (ಬಿಎಂಎಸ್) ಕಾಸರಗೋಡು ಜಿಲ್ಲಾ ಸಮಿತಿಯು ಕೇರಳ ಸರ್ಕಾರ ಮತ್ತು ದೇವಸ್ವಂ ಮಂಡಳಿಯ ನೇತೃತ್ವದಲ್ಲಿ ಶಬರಿಮಲೆ ಮತ್ತು ಇತರ ದೇವಾಲಯಗಳಲ್ಲಿ ನಡೆಯುತ್ತಿರುವ ಲೂಟಿಯ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದೆ.
ಅಭಿಯಾನದ ಅಂಗವಾಗಿ ಪ್ರತಿಭಟನಾ ಧರಣಿ ಕಾಸರಗೋಡು ನಗರದಲ್ಲಿ ಜರುಗಿತು. ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ರಾಜ್ಯ ಸಮಿತಿ ಉಪಾಧ್ಯಕ್ಷ ವಕೀಲ ಪಿ ಮುರಳೀಧರನ್ ಧರಣಿ ಉದ್ಘಾಟಿಸಿದರು. ಮಲಬಾರ್ ದೇವಸ್ವಂ ನೌಕರರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಮಧು ಕೆ. ಕೀಯೂರ್ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜತೆಕಾರ್ಯದರ್ಶಿ ಪಿ ದಿನೇಶ್ ಬಂಬ್ರಾಣ, ಹರೀಶ್ ಕುದ್ರೆಪ್ಪಾಡಿ, ಕಾಸರಗೋಡು ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಬಾಬುಮೋನ್ ಕೆ ಚೆಂಗಳ, ಉದುಮ ವಲಯ ಕಾರ್ಯದರ್ಶಿ ಭಾಸ್ಕರನ್ ಪೆÇಯಿನಾಚಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪುಷ್ಪರಾಜ್ ಕೊರಕ್ಕೋಡ್, ರವಿ ಎಂ.ಕೆ.ಕೋಳಿಯೂರು, ರಾಜನ್ ಮಾರಾರ್ ಚೆರುವತ್ತೂರು, ಓಮನ ಕೀಜೂರು ರಮೇಶ್ ಮಧೂರು ಧರಣಿಗೆ ನೇತೃತ್ವ ವಹಿಸಿದ್ದರು. ಮಲಬಾರ್ ದೇವಸ್ವಂ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಗುರುದಾಸ್ ಮಧೂರು ಸ್ವಾಗತಿಸಿದರು. ಕೃಷ್ಣ ಕಾರಂತ ಕೋಳಿಯೂರು ವಂದಿಸಿದರು.

