ಕಾಸರಗೋಡು: ನಗರದ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ 8 ನೇ ವರ್ಷದ'ಕಾಸರಗೋಡು ಯಕ್ಷೋತ್ಸವ'ಕಾರ್ಯಕ್ರಮ ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಜರುಗಿತು.
ಕಾಸರಗೋಡು ಯಕ್ಷೋತ್ಸವವನ್ನು ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಉದ್ಘಾಟಿಸಿದರು.
ಕಾಸರಗೋಡು ಜನರಲ್ ಆಸ್ಪತ್ರೆ ಖ್ಯಾತ ವೈದ್ಯ ಡಾ. ಜನಾರ್ದನ ನಾಯ್ಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಯಕ್ಷಗಾನ ಮಾನಸಿಕ ಹಾಗೂ ಬೌದ್ಧಿಕವಾಗಿ ಉಲ್ಲಾಸ ನೀಡುವ ಅಧ್ಬುತ ಕಲೆಯಾಗಿದೆ. ಆರಾಧನಾ ಕಲೆಯಾಗಿರುವ ಯಕ್ಷಗಾನ ಹಲವಾರು ಮಂದಿಗೆ ಜೀವನ ಕಟ್ಟಿಕೊಡುವುದರ ಜತೆಗೆ ಮನುಷ್ಯನ ಮನಸ್ಸಿನಲ್ಲಿ ಸಮತೋಲನ ಕಾಪಾಡುವ ಅದ್ಭುತ ಚಿಕಿತ್ಸಾ ಕಲೆಯೂ ಆಗಿದೆ ಎಂದು ತಿಳಿಸಿದರು.
ತರಬೇತಿ ಕೇಂದ್ರದ ಅಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ ಅಧ್ಯಕ್ಷತೆ ವಹಿದ್ದರದ್ದೀ ಸಂದರ್ಭ ಹಿರಿಯ ಭಾಗವತ ನಿವೃತ್ತ ಅಧ್ಯಾಪಕ ತಲ್ಪನಾಜೆ ವೆಂಕಟ್ರಮಣ ಭಟ್ ಅವರನ್ನು ಸನ್ಮಾನಿಸಲಾಯಿತು. ತರಬೇತಿ ಕೇಂದ್ರದ ಗುರುಗಳಾದ ರಾಕೇಶ್ ರೈ ಅಡ್ಕ ಉಪಸ್ಥಿತರಿದ್ದರು. ಕೆ.ವಿ.ತಿರುಮಲೇಶ ಹೊಳ್ಳ ಸ್ವಾಗತಿಸಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಕಿಶೋರ್ ಕುಮಾರ್ ವಂದಿಸಿದರು





