ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಪ್ರತಿಷ್ಠಾನ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮ ನವೆಂಬರ್ 4ರಂದು ಕಾಸರಗೋಡು ಪಾರೆಕಟ್ಟ ಕನ್ನಡಗ್ರಾಮದಲ್ಲಿ ಜರುಗಲಿದೆ.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ (ರಿ ), ಕನ್ನಡ ಗ್ರಾಮ, ಕಾಸರಗೋಡು ಇದರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಇದರ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 6.30ರಿಂದ 60 ಮಂದಿ ಗಾಯಕ ಗಾಯಕರಿಂದ ಗಾಯನೋತ್ಸವ, 8.00 ರಿಂದ ಧಾರ್ಮಿಕ ಸಂಪ್ರದಾಯದ ಪೂಜೆ, 9.15ಕ್ಕೆ ಕನ್ನಡಮ್ಮನ - ತಾಯಿ ಭುವನೇಶ್ವರಿಯ ಛಾಯಾಚಿತ್ರದ ಅನಾವರಣ, 9.30 ಕ್ಕೆ ರಾಷ್ಟ್ರ ಧ್ವಜಾರೋಹಣ, 9. 45 ಕ್ಕೆ 'ಶಿವರಾಮ ಕಾಸರಗೋಡು-60' ಫೆÇೀಟೋ ಗ್ಯಾಲರಿ ಉದ್ಘಾಟನೆ, 10.30 ಕ್ಕೆ ಕರ್ನಾಟಕ ಏಕೀಕರಣ, ಕಾಸರಗೋಡು ವಿಲೀನೀಕರಣಕ್ಕಾಗಿ ಬಹುಕಾಲದಿಂದ ಕನ್ನಡ, ಕನ್ನಡಿಗರ ಹೋರಾಟಗಳಿಗೆ, ಗಡಿನಾಡು ಕಾಸರಗೋಡಿನಲ್ಲಿ ಮಹಾಜನ ಆಯೋಗದ ವರದಿ ಜ್ಯಾರಿಗಾಗಿ ಒತ್ತಾಯಿಸಿ ನಿರಂತರವಾಗಿ ದುಡಿದು ಸೇವೆ ಸಲ್ಲಿಸಿ ಕೀರ್ತಿ ಶೇಷರಾದ 60 ಮಂದಿ ಕನ್ನಡ ಸತ್ಯಾಗ್ರಹಿಗಳು, ಕನ್ನಡ ಕಟ್ವಾಳುಗಳು, ಕನ್ನಡ ಹೋರಾಟಗಾರರು ಕನ್ನಡ ಸಂಘಟನೆಗಳ ಮುಖಂಡರ ಭಾವಚಿತ್ರಕ್ಕೆ ಪುಷ್ಪ ನಮನ ನಡೆಯುವುದು.
11.00 ಕ್ಕೆ ರಾಜ್ಯಮಟ್ಟದ ಕವಿಗೋಷ್ಠಿ, ಮಧ್ಯಾಹ್ನ 12 ಕ್ಕೆ ಕಾಸರಗೋಡು ಕನ್ನಡಿಗ, ಗಡಿನಾಡು-ಹೊರನಾಡು ಕನ್ನಡಿಗ, ಕರ್ನಾಟಕ ಸರ್ಕಾರ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ, 2ಗಂಟೆಗೆ ಖ್ಯಾತ ಗಾಯಕ ಗಾಯಕರಿಂದ ಸುಗಮ ಸಂಗೀತ ಗಾಯನೋತ್ಸವ, 3ಕ್ಕೆ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡ ಸಾಂಸ್ಕೃತಿಕ ರಾಯಬಾರಿಗಳು ಹಾಗೂ ವಿವಿಧ ಕ್ಷೇತ್ರದ ಕನ್ನಡ ಸಾಧಕರಿಗೆ, ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಸಂಜೆ 4ಕ್ಕೆ ಶಿವರಾಮ ಕಾಸರಗೋಡು 60ನೇ ವರ್ಷದ ಜನ್ಮದಿನೋತ್ಸವ ಅಭಿನಂದನಾ ಸಮಾರಂಭ, ಕಾಶಿ-ಅಭಿನಂದನಾ ಕೃತಿ ಬಿಡುಗಡೆ, ಕಾಶಿ-ನಿಧಿ ಸಮರ್ಪಣೆ ಹಾಗೂ ಕಾಸರಗೋಡು ಗೋಶಾಲೆ, ಕೇರಳ-ಕರ್ನಾಟಕ ಭವನದ ಶಿಲಾನ್ಯಾಸ ಕಾರ್ಯಕ್ರಮ ನಡೆಯುವುದು. ಸಂಜೆ 6ಕ್ಕೆ ಕೇರಳ-ಕರ್ನಾಟಕ ರಾಜ್ಯದ ವಿವಿಧ ಸಂಘ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯುವುದು.




