HEALTH TIPS

ಅ.7 ರಂದು ಕಾಸರಗೋಡಿನಲ್ಲಿ ಧರ್ಮರಕ್ಷಾ ಸಂಗಮ, ಧರ್ಮಸಂದೇಶ ಯಾತ್ರೆಗೆ ಚಾಲನೆ-6 ರಂದು ಕುದ್ರೋಳಿ ಕ್ಷೇತ್ರದಲ್ಲಿ ದೀಪ ಪ್ರಜ್ವಲನೆ

ಕಾಸರಗೋಡು: ಕೇರಳ ಮಾರ್ಗದರ್ಶಕ ಮಂಡಳಿ ವತಿಯಿಂದ ಧರ್ಮಸಂದೇಶ ಯಾತ್ರೆ ಕಾಸರಗೋಡಿನಿಂದ ಆರಂಭಗೊಂಡು ತಿರುವನಂತಪುರ ವರೆಗೆ ನಡೆಯಲಿದೆ. ಎರಡು ವಾರಗಳ ಕಾಲ ನಡೆಯಲಿರುವ ಧರ್ಮಸಂದೇಶ ಯಾತ್ರೆಗೆ ಅ. 7ರಂದು ಮಧ್ಯಾಃನ 3ಕ್ಕೆ ಕಾಸರಗೋಡು ತಾಳಿಪಡ್ಪು ಮೈದಾನದಿಂದ ಚಾಲನೆ ನೀಡಲಾಗುವುದು. 21ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.  ರಾಜ್ಯದ ನೂರರಷ್ಟು ಸಂತರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಪೂರ್ವಭಾವಿಯಾಗಿ ಧರ್ಮರಕ್ಷ ಸಂಗಮ 7ರಂದು ಬೆಳಗ್ಗೆ 10ಕ್ಕೆ ವಿದ್ಯಾನಗರದ ಚಿನ್ಮಯ ಸಿ.ಬಿ.ಸಿ ಸಭಾಂಗಣದಲ್ಲಿ ಜರುಗಲಿದೆ. ಮಧ್ಯಾಹ್ನ 2.30ಕ್ಕೆ ಕಾಸರಗೋಡು ಕರಂದಕ್ಕಾಡಿನಿಂದ ತಾಳಿಪಡ್ಪು ಮೈದಾನ ವರೆಗೆ ಭವ್ಯ ಶೋಭಾಯಾತ್ರೆ ನಡೆಯುವುದು. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೊಳತ್ತೂರು ಅದ್ವೈತಾಶ್ರಮದ ಮಠಾಧೀಶ, ಮಾರ್ಗದರ್ಶಕ ಮಂಡಳಿ ಪ್ರಾಂತ್ಯಾಧ್ಯಕ್ಷ ಶ್ರೀ ಚಿದಾನಂದ ಪುರಿ ಸ್ವಾಮೀಜಿ ಉದ್ಘಾಟಿಸಿ ಮುಖ್ಯಭಾಷಣ ಮಾಡುವರು.

ಕೇರಳದ ಭಾಷೆ, ಸಾಹಿತ್ಯ, ಕಲೆ, ವಸ್ತ್ರಧಾರಣೆ, ಆಚಾರ-ವಿಚಾರಗಳಲ್ಲಿ ಕೇರಳ ಹೊಂದಿದ್ದ ವೈಶಿಷ್ಟ್ಯಪೂರ್ಣ ಮೌಲ್ಯ ಕಣ್ಮರೆಯಾಗುತ್ತಿದೆ. ಯುವಜನಾಂಗ ಮಾದಕವಸ್ತುಗ ದಾಸ್ಯಕ್ಕೆ ಬಲಿಯಾಗುತ್ತಿದ್ದಾರೆ.ಇಂತಹ ಜ್ವಲಂತ ಸಮಸ್ಯೆಗಳ ಕಡೆಗೆ ಹಿಂದೂಸಮಾಜದ ಗಮನಸೆಳೆಯುವ ಉದ್ದೇಶದಿಂದ ಯತಿವರ್ಯರ ನೇತೃತ್ವದಲ್ಲಿ ಧರ್ಮಸಂದೇಶ ಯಾತ್ರೆ ಆಯೋಜಿಸಲಾಗಿದೆ. ಯಾತ್ರೆ ಯಶಸ್ವಿಗಾಗಿ ರಾಜ್ಯಮಟ್ಟದಲ್ಲಿ ಸಿ. ರಾಧಾಕೃಷ್ಣನ್ ಅಧ್ಯಕ್ಷ, ಶ್ರೀಮದ್ ಸ್ವಾಮಿ ಅಯ್ಯಪ್ಪದಾಸ್ ಕಾರ್ಯಾಧ್ಯಕ್ಷ, ಶ್ರೀಮದ್ ಸ್ವಾಮೀ ಸದ್‍ಸ್ವರೂಪಾನಂದ ಸ್ವಾಮೀ ಪ್ರಧಾನ ಸಂಚಾಲಕರಾಗಿರುವ ಸಮಿತಿ ಕಾರ್ಯನಿರ್ವಹಿಸುತ್ತಿದೆ.

ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ, ಚಿನ್ಮಯಾ ಮಿಷನ್ ವಲಯ ಪ್ರಮುಖರಾದ ಶ್ರೀ ವಿವಿಕ್ತಾನಂದ ಸರಸ್ವತೀ ಸ್ವಾಮೀಜಿ ಸೇರಿದಂತೆ ಯತಿವರ್ಯರು ಧರ್ಮಸಂದೇಶ ಯಾತ್ರೆಯ ರಕ್ಷಾಧಿಕಾರಿಗಳಾಗಿದ್ದಾರೆ.

ಅ.6ಕ್ಕೆ ಯತಿಶ್ರೇಷ್ಠರ ಆಗಮನ:

ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಅ. 6ರಂದು ಯತಿವರೇಣ್ಯರು ಒಟ್ಟುಸೇರಲಿದ್ದು, ದೀಪ ಪ್ರಜ್ವಲನೆಗೊಳಿಸುವ ಮೂಲಕ ಧರ್ಮಸಂದೇಶ ಯಾತ್ರೆ ಕೇರಳದ ಕಡೆ ಹೊರಡಲಿದೆ. ಅಂದು ಸಂಜೆ 5ಕ್ಕೆ ತಲಪ್ಪಾಡಿಯಲ್ಲಿ ಯತಿವರ್ಯರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕರೆದೊಯ್ಯಲಾಗುವುದು. ಅಲ್ಲಿ ತಂಗುವ ಯತಿವರ್ಯರು, ಅ. 7ರಂದು ಬೆಳಗ್ಗೆ 9ಕ್ಕೆ ಕ್ಷೇತ್ರಸಮಿತಿ ಪದಾಧಿಕಾರಿಗಳು, ಸಮುದಾಯ ನೇತಾರರು, ಗುರುಸ್ವಾಮಿಗಳ ಜತೆ ಮಧೂರಿನಿಂದ ವಿದ್ಯಾನಗರ ಚಿನ್ಮಯಸಭಾಂಗಣ ತಲುಪುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries