ಕಾಸರಗೋಡು: ಕಾಸರಗೋಡು ಡಿಪೆÇೀದಿಂದ ಮಂಗಳೂರಿಗೆ ಹೊಸದಾಗಿ ಆರಂಭಿಸಲಾದ ಕೆಎಸ್‍ಆರ್‍ಟಿಸಿ ಫಾಸ್ಟ್ ಪ್ಯಾಸೆಂಜರ್ ಬಸ್‍ಗೆ ಶಾಸಕ ಎನ್.ಎ. ನೆಲ್ಲಿಕುನ್ನು ಅವರು ಹಸಿರುನಿಶಾನಿ ತೋರಿಸುವ ಮೂಲಕ ಚಾಲನೆ ನೀಡಿದರು. ಎಟಿಒ ಪ್ರಿಯೇಶ್ ಕುಮಾರ್ ಮತ್ತು ಜನರಲ್ ನಿಯಂತ್ರಣಾಧಿಕಾರಿ ಎಂ.ಕೆ. ಸಜಿತ್ ಮೋಹನನ್ ಪಾಡಿ, ಕೇರಳ ಕಾಂಗ್ರೆಸ್ ಮುಖಂಡ ನಂದಕುಮಾರ್ ಉಪಸ್ಥಿತರಿದ್ದರು. ಕುಂಬಳ, ಬಂದ್ಯೋಡು, ಕೈಕಂಬ, ಉಪ್ಪಳ, ಹೊಸಂಗಡಿ, ಮಂಜೇಶ್ವರ ಮತ್ತು ತಲಪ್ಪಾಡಿ ತೊಕ್ಕೊಟ್ಟಿನಲ್ಲಿ ನಿಲುಗಡೆ ಇರಲಿದೆ. ಪ್ರಸಕ್ತ ಎರಡು ಹೊಸ ಬಸ್‍ಗಳ ಸಂಚಾರ ಆರಂಭಗೊಂಡಿದೆ.




