ಕುಂಬಳೆ: ಕುಂಬಳೆ ಉಪ ಅಂಚೆ ಕಚೇರಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಿಕ್ಕಾಡಿ ಶಾಖಾ ಅಂಚೆ ಕಚೇರಿಯ ಕಾರ್ಯಾಚರಣೆಯನ್ನು ಅ. 7ರಿಂದ ಸ್ಥಗಿತಗೊಳಿಸಲಾಗಿದ್ದು, ಅ. 8ರಿಂದ ಸೀತಾಂಗೋಳಿ ಪೇಟೆಯಲ್ಲಿ ಸೀತಾಂಗೋಳಿ ಶಾಖಾ ಅಂಚೆ ಕಚೇರಿ ಎಂಬ ಹೆಸರಿನಲ್ಲಿ ಚಟುವಟಿಕೆ ಆರಂಬಿಸಿದೆ.
ಅರಿಕ್ಕಾಡಿ ಶಾಖಾ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಉಳಿತಾಯ ಖಾತೆಗಳನ್ನು ಸೀತಾಂಗೋಳಿ ಶಾಖಾ ಅಂಚೆ ಕಚೇರಿಗೆ ಮತ್ತು ಸೀತಾಂಗೋಳಿ ಜಂಕ್ಷನ್ ಮಿತಿಯೊಳಗಿನ ಪ್ರದೇಶಗಳು, ಚೌಕಾರ್ ರಸ್ತೆ, ಪೆರ್ಡಾಲಮೂಲೆ, ಕುದ್ರೆಪ್ಪಾಡಿ, ದೊಡ್ಡಡ್ಕ, ಚೌಕಿ, ದರ್ಬೇತ್ತಡ್ಕ, ಮಜೀರ್‍ಪಳ್ಳಕಟ್ಟೆ, ಕುಲಾಲನಗರ, ಮುಗು ರಸ್ತೆ ಪಳ್ಳಂ, ಸರ್ಕಾರಿ ಐಟಿಐ, ಎಂ.ಎ. ಆಡಿಟೋರಿಯಂ, ಮರಕಾಡ್, ಕೇರಳ ರಾಜ್ಯ ಪಾನೀಯ ನಿಗಮದ ಔಟ್‍ಲೆಟ್,ಸರ್ಕಾರಿ ಐಟಿಐ, ಎಂಎ ಆಡಿಟೋರಿಯಂ, ಕೋಡಿಮೂಲೆ, ಮುಕಾರಿಕಂಡ ಮತ್ತು ಕೆಚ್ಚನಾಡಿ ಪ್ರದೇಶಗಳಿಗೆ ಎಲ್ಲಾ ಅಂಚೆ ವಿತರಣೆಗಳನ್ನು ಇನ್ನುಮುಂದೆ ಸೀತಾಂಗೋಳಿ ಅಂಚೆ ಕಚೇರಿ ಮೂಲಕ ನಿರ್ವಹಿಸಲಾಗುವುದು ಎಂದು ಅಂಚೆ ಇಲಾಖೆ ಪ್ರಕಟಣೆ ತಿಳಿಸಿದೆ.

