ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳಿಗೆ ಮುಂಚಿತವಾಗಿ, ಕಾರಡ್ಕ, ಮಂಜೇಶ್ವರ ಮತ್ತು ಕಾಞಂಗಾಡ್ ಬ್ಲಾಕ್‍ಗಳ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿನ ಕ್ಷೇತ್ರಗಳು ಮತ್ತು ವಾರ್ಡ್‍ಗಳಿಗೆ ಮೀಸಲಾತಿ ಆದೇಶವನ್ನು ಚೀಟಿ ಎತ್ತುವ ಮೂಲಕ ತೀರ್ಮಾನಿಸಲಾಯಿತು. ಆಯಾ ಬ್ಲಾಕ್ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಗಳಿಗೆ ವಾರ್ಡು ಮೀಸಲಾತಿ ನಿರ್ಣಯದ ಬಗ್ಗೆ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ಚೀಟಿ ಎತ್ತಲಾಯಿತು. ಸ್ಥಳೀಯಾಡಳಿತ ಆಡಳಿತ ಇಲಾಖೆಯ ಜಂಟಿ ನಿರ್ದೇಶಕ ಆರ್.ಶೈನಿ, ಉಪನಿರ್ದೇಶಕ ಕೆ.ವಿ.ಹರಿದಾಸ್, ಚುನಾವಣಾ ಅಪರ ಜಿಲ್ಲಾಧಿಕಾರಿ ಗೋಪಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಕಾಞಂಗಾಡ್, ಮಂಜೇಶ್ವರಂ ಕಾರಡ್ಕ ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯಿತಿ ವಾರ್ಡುಗಳ ಮಹಿಳೆಯರು, ಪರಿಶಿಷ್ಟ ಜಾತಿ ಮಹಿಳೆಯರು, ಪರಿಶಿಷ್ಟ ಪಂಗಡದ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಗಳಿಗೆ ಮೀಸಲಾಗಿರುವ ಸ್ಥಾನಗಳ ಸಂಖ್ಯೆಯನ್ನು ಯಾವ ಕ್ಷೇತ್ರಗಳಿಗೆ ಪುನರಾವರ್ತನೆಯ ಕ್ರಮದಲ್ಲಿ ಹಂಚಬೇಕು, ಯಾವ ವಾರ್ಡ್‍ಗಳನ್ನು ನೀಡಬೇಕು ಎಂಬ ಬಗ್ಗೆ ಚೀಟಿ ಎತ್ತುವ ಮೂಲಕ ನಿರ್ಣಯಿಸಲಾಯಿತು.
ಬ್ಲಾಕ್ ಪಂಚಾಯತ್‍ಗಳಲ್ಲಿನ ಕ್ಷೇತ್ರಗಳ ಮೀಸಲಾತಿಯನ್ನು ನಿರ್ಣಯ ಚೀಟಿ ಎತ್ತುವ ಪ್ರಕ್ರಿಯೆ ಅ. 18 ರಂದು ಬೆಳಿಗ್ಗೆ 10ಕ್ಕೆ ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಮೀಸಲಾತಿ ನಿರ್ಧರಿಸಲು ಲಾಟರಿ ಎತ್ತುವ ಕಾರ್ಯ ಅಕ್ಟೋಬರ್ 21 ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ. ನೀಲೇಶ್ವರ, ಪರಪ್ಪ ಮತ್ತು ಕಾಸರಗೋಡು ಬ್ಲಾಕ್‍ಗಳಿಗೆ ಅ. 14 ರಂದು ಹಾಗೂ ಬ್ಲಾಕ್ ಪಂಚಾಯಿತಿ ಮೀಸಲಾತಿ ವಾರ್ಡ್‍ಗಳ ಡ್ರಾ ಅಕ್ಟೋಬರ್ 18 ರಂದು ನಡೆಯಲಿದೆ.


