ಕುಂಬಳೆ: ಕುಂಬಳೆಯಲ್ಲಿ ಇಂದು(ಭಾನುವಾರ) ಸಮಾರೋಪಗೊಳ್ಳಲಿರುವ ಬ್ಲಾಕ್ ಮಟ್ಟದ ಕೇರಲೋತ್ಸವ ಕಾರ್ಯಕ್ರಮದ ವಿಜೇತರಿಗೆ
ದುಬೈ ಮಲಬಾರ್ ಕಲ್ಚರಲ್ ಸೆಂಟರ್ ವತಿಯಿಂದ ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ಸ್ಮರಣಾರ್ಥ ಟ್ರೋಫಿ ನೀಡಲಾಗುವುದು. ಚಾಂಪಿಯನ್ ಮತ್ತು ರನ್ನರ್ಸ್ ಗಳಿಗೆ ನೀಡಲಾಗುವ ಟ್ರೋಫಿಗಳನ್ನು ಕಾಸರಗೋಡು ಬ್ಲಾಕ್ ಪಂಚಾಯತಿ ಸಮಿತಿ ಅಧ್ಯಕ್ಷ ಹಾಗೂ ದುಬೈ ಮಲಬಾರ್ ಕಲ್ಚರಲ್ ಸೆಂಟರ್ ಕಾರ್ಯದರ್ಶಿ ಅಶ್ರಫ್ ಕಾರ್ಲೆ ಅವರ ಉಪಸ್ಥಿತಿಯಲ್ಲಿ ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್ ಕುಂಬಳೆ ಫ್ರೆಸ್ ಪೋರಂನಲ್ಲಿ ಬಿಡುಗಡೆಗೊಳಿಸಿದರು.
ಬಿ.ಎನ್. ಮುಹಮ್ಮದ್ ಅಲಿ, ಪ್ರೀತಿರಾಜ್, ರವೀಂದ್ರನಾಥ್, ಮುಹಮ್ಮದ್ ಕುಂಞÂ್ಞ, ಅಬ್ದುಲ್ಲ ಬನ್ನಂಕುಳಂ, ಸತ್ತಾರ್ ಆರಿಕ್ಕಾಡಿ, ಜಮ್ಶಿ ಮೊಗ್ರಾಲ್, ಕೇರಳ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಸುರೇಂದ್ರನ್ ಚೀಮೇನಿ, ಕುಂಬಳ:ಎ ಪ್ರೆಸ್ ಪೋರಂ ಅಧ್ಯಕ್ಷ ಕೆ.ಎಂ.ಎ. ಸತ್ತಾರ್, ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ, ಅಬ್ದುಲ್ಲತೀಫ್ ಉಳುವಾರ್, ಲತೀಫ್ ಜೆ.ಎಚ್.ಎಲ್, ಅಶ್ರಫ್ ಸ್ಕೈಲರ್ ಮೊದಲಾದವರು ಉಪಸ್ಥಿತರಿದ್ದರು.

.jpg)
.jpg)
