ಮಂಜೇಶ್ವರ: ಕೊಡ್ಲಮೊಗರು ಎಸ್.ವಿ.ವಿ.ಎಚ್.ಎಸ್. ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ಮೇಳದ ಹಿರಿಯ ಪ್ರಾಥಮಿಕ(ಯುಪಿ) ವಿಭಾಗದಲ್ಲಿ ಪಾತಿಮತ್ ರಿಜ್ನಾ ನಂಬರ್ ಚಾರ್ಟ್‍ನಲ್ಲಿ 'ಎ' ಗ್ರೇಡ್ ನೊಂದಿಗೆ ಪ್ರಥಮ ಹಾಗೂ ಗಣಿತ ರಸಪ್ರಶ್ನೆಯಲ್ಲಿ ತೃತೀಯ ಸ್ಥಾನ, ಪಝಲ್ ನಲ್ಲಿ ಜಮ್ಶೀರ "ಎ' ಗ್ರೇಡ್ ನೊಂದಿಗೆ ಪ್ರಥಮ, ನಫೀಸತ್ ಶಮ್ಲಾ ಕೆ.ಪಿ., ಮಾಡಲ್ ನಲ್ಲಿ 'ಎ' ಗ್ರೇಡ್‍ನೊಂದಿಗೆ ದ್ವಿತೀಯ, ಗೇಮ್ಸ್ ನಲ್ಲಿ ಆಯಿಷತ್ ಆಫಿಯ 'ಎ' ಗ್ರೇಡ್ ಹಾಗೂ ಜಿಯೋ ಮೆಟ್ರಿಕ್ ಚಾರ್ಟ್‍ನಲ್ಲಿ ಜುವೈರಿಯ 'ಎ' ಗ್ರೇಡ್ ಪಡೆದು ಬಾಕ್ರಬೈಲು ಶಾಲೆಗೆ ಸಮಗ್ರ ಚಾಂಪಿಯನ್ ಶಿಪ್ ದೊರಕಿಸಿ ಕೊಟ್ಟಿರುತ್ತಾರೆ. ಇವರನ್ನು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ, ಪ್ರಬಂಧಕಿ ಹಾಗೂ ರಕ್ಷಕರು ಅಭಿನಂದಿಸಿದ್ದಾರೆ.

.jpg)
