ಕಾಸರಗೋಡು: "ನಾರಿ ಶಕ್ತಿ" ಯೋಜನೆಯನ್ವಯ ಪಾಲಕ್ಕಾಡ್ ವಿಭಾಗ ರೈಲ್ವೆ ರಕ್ಷಣಾ ಪಡೆ (ಆರ್‍ಪಿಎಫ್), ವಿಭಾಗದಾದ್ಯಂತ ವಿವಿಧ ಆರ್‍ಪಿಎಫ್ ಹುದ್ದೆಗಳಿಗೆ ಏಳು ಸ್ಕೂಟರ್‍ಗಳನ್ನು ವಿತರಿಸಿದೆ. ಆರ್‍ಪಿಎಫ್‍ನ ಮಹಿಳಾ ಸಿಬ್ಬಂದಿಯ ಚಲನಶೀಲತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಒಟ್ಟು 5,64,796 ವೆಚ್ಚದಲ್ಲಿ ದ್ವಿಚಕ್ರ ವಾಹನ ವಿತರಿಸಲಾಗಿದೆ. ಇದು ಭಾರತೀಯ ರೈಲ್ವೆ ವಿಭಾಗದಲ್ಲಿ ಆರ್‍ಪಿಎಫ್ ಪಾಲಕ್ಕಾಡಿನ ಮಹಿಳಾ ಸಿಬ್ಬಂದಿಗೆ ಇದೇ ಮೊದಲ ಬಾರಿಗೆ ಯೋಜನೆ ಜಾರಿಗೊಳಿಸಲಾಗಿದೆ
ಮಹಿಳಾ ಆರ್‍ಪಿಎಫ್ ಸಿಬ್ಬಂದಿ ರಸ್ತೆ ಸನಿಹದ ರೈಲ್ವೆ ನಿಲ್ದಾಣಗಳು ಮತ್ತು ಇತರ ಪ್ರದೇಶಗಳಿಗೆ ಭೇಟಿ ನೀಡುವುದು ಸೇರಿದಂತೆ ಆಗಾಗ ಗಸ್ತು ಮತ್ತು ಔಟ್‍ರೀಚ್ ಕರ್ತವ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಸುಧಾರಿಸುವಲ್ಲೂ ಇದು ಸಹಕಾರಿಯಾಗಲಿದೆ. ಜತೆಗೆ ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣದ ವಾತಾವರಣವನ್ನು ಬೆಳೆಸಲು ಸಹಕಾರಿಯಾಗಲಿರುವುದಾಗಿ ವಿಭಾಗೀಯ ರೈಲ್ವೆ ಪ್ರಕಟಣೆ ತಿಳಿಸಿದೆ.





