HEALTH TIPS

ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮ ವಾರ್ಷಿಕಾಚರಣೆ-ದೇಶವ್ಯಾಪಿ ಕಾರ್ಯಕ್ರಮ

ಕಾಸರಗೋಡು: ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮ ವಾರ್ಷಿಕಾಚರಣೆಯ ಅಂಗವಾಗಿ ಯುವ ಜನ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿ ಮೇರಾ ಯುವ ಭಾರತ್ ದೇಶದಾದ್ಯಂತ ವ್ಯಾಪಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ರಾಜ್ಯಗಳ ಏಕೀಕರಣದ ಮೂಲಕ ಸಂಯುಕ್ತ ಭಾರತವನ್ನು ನಿರ್ಮಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರು ವಹಿಸಿದ್ದ ಪಾತ್ರವನ್ನು ಯುವಜನರಿಗೆ ತಿಳಿಸುವುದು ಮತ್ತು ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಯುವಜನರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದು ಈ ಕಾರ್ಯಕ್ರಮಗಳ ಉದ್ದೇಶವಾಗಿದೆ. ಮುಂದಿನ ಎರಡು ತಿಂಗಳು 'ಮೇರಾ ಯುವ ಭಾರತ್' ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅಕ್ಟೋಬರ್ 31 ಮತ್ತು ನವೆಂಬರ್ 16 ರ ನಡುವೆ ಜಿಲ್ಲೆಯಲ್ಲಿ ಏಕತಾ ಪಾದಯಾತ್ರೆ - ಯೂನಿಟಿ ಮಾರ್ಚ್

ಆಯೋಜಿಸಲಾಗುವುದು. 'ಏಕ ಭಾರತ ಶ್ರೇಷ್ಠ ಭಾರತ' ಎಂಬ ಸಂದೇಶದೊಂದಿಗೆ ಸರ್ದಾರ್ ಪಟೇಲ್ ಅವರ ಆಲೋಚನೆಗಳನ್ನು ಯುವ ಹೃದಯಗಳಿಗೆ ತಲುಪಿಸುವುದು ಈ ಪಾದಯಾತ್ರೆಯ ಉದ್ದೇಶವಾಗಿದೆ.

'ಸರ್ದಾರ್@150' ಏಕತಾ ಪಾದಯಾತ್ರೆಯ ಡಿಜಿಟಲ್ ಹಂತದಲ್ಲಿ ಸಾಮಾಜಿಕ ಮಾಧ್ಯಮ ರೀಲ್ ಸ್ಪರ್ಧೆಗಳು, ಪ್ರಬಂಧ ಸ್ಪರ್ಧೆಗಳು, ಸರ್ದಾರ್ @150 ಯಂಗ್ ಲೀಡರ್ಸ್ ಪೆÇ್ರೀಗ್ರಾಂ ಕ್ವಿಜ್ (Sardar@150 Young Leaders Quiz) ಅನ್ನು ಆಯೋಜಿಸಲಾಗುವುದು. ನೋಂದಣಿ ಮತ್ತು ಎಲ್ಲಾ ಚಟುವಟಿಕೆಗಳ ವಿವರಗಳು 'ಸರ್ದಾರ್ @150 ಎಂಬ ಮೈ ಭಾರತ್ ಪೆÇೀರ್ಟಲ್‍ನಲ್ಲಿ ಲಭ್ಯವಿದೆ (https://mybharat.gov.in/pages/unity_march). ಇದು ದೇಶಾದ್ಯಂತ ನಡೆಯುವ ಕಾರ್ಯಕ್ರಮವಗಿದ್ದು, ದೇಶಾದ್ಯಂತ ಯುವಕರು ಇದರಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಈ ಐತಿಹಾಸಿಕ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಯುವ ಭಾರತದ ಉಪ ನಿರ್ದೇಶಕಿ ಮೇರಿ ಕಾಸರಗೋಡು ತಿಳಿಸಿದ್ದಾರೆ.

ರಾಷ್ಟ್ರೀಯ ಪಾದಯಾತ್ರೆಯು ಸಂವಿಧಾನ ದಿನವಾದ ನವೆಂಬರ್ 26 ರಂದು ಪ್ರಾರಂಭವಾಗಿ ಡಿಸೆಂಬರ್ 6 ರಂದು ಕೊನೆಗೊಳ್ಳಲಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮಸ್ಥಳವಾದ ಕರಂಸಾದ್‍ನಿಂದ ಪ್ರಾರಂಭವಾಗಿ ಕೆವಾಡಿಯಾದ ಏಕತಾ ಪ್ರತಿಮೆಯಲ್ಲಿ ಕೊನೆಗೊಳ್ಳುವ ಈ ಐತಿಹಾಸಿಕ ಪಾದಯಾತ್ರೆಯು 152 ಕಿಲೋಮೀಟರ್ ಕ್ರಮಿಸಲಿದೆ.  ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ0 ಪಾದಯಾತ್ರೆಯಲ್ಲಿ ಪ್ರತಿ ಜಿಲ್ಲೆಯಿಂದ ಇಬ್ಬರು ಪ್ರತಿನಿಧಿಗಳಿಗೆ ಭಾಗವಹಿಸಲು ಅವಕಾಶ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ.  













ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries