ಕಾಸರಗೋಡು: ಜಿಲ್ಲಾ ಸಾಮಾಜಿಕ ನೀತಿ ಕಚೇರಿಯಲ್ಲಿ ಸ್ಕೀಮ್ ಮ್ಯಾನೇಜ್‍ಮೆಂಟ್, ಡಿಜಿಟಲ್ ಮತ್ತು ಐಟಿ ವಿಭಾಗಗಳಲ್ಲಿ ಸ್ಟೈಪೆಂಡ್‍ನೊಂದಿಗೆ 2025-26 ನೇ ಸಾಲಿಗೆ ಇಂಟರ್ನ್‍ಗಳನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಸ್ಕೀಮ್ ಮ್ಯಾನೇಜ್‍ಮೆಂಟ್ ವಿಭಾಗಕ್ಕೆ ಎಂ.ಎ. ಸೋಷಿಯಾಲಜಿ, ಎಂ.ಎ. ಸೈಕಾಲಜಿ, ಎಂ.ಎಸ್.ಡಬ್ಲ್ಯೂ ಅಥವಾ ತತ್ಸಮಾನ ಅರ್ಹತೆ ಇರುವವರು, ಮತ್ತು ಡಿಜಿಟಲ್ ಮತ್ತು ಐಟಿ ವಿಭಾಗಕ್ಕೆ ಬಿ.ಟೆಕ್., ಕಂಪ್ಯೂಟರ್ ಸೈನ್ಸ್, ಎಂ.ಸಿ.ಎ ಅಥವಾ ತತ್ಸಮಾನ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಹತೆ, ವಯಸ್ಸು, ವಿಳಾಸವನ್ನು ದೃಢೀಕರಿಸುವ ದಾಖಲೆಗಳ ಮೂಲ ಪ್ರತಿ ಮತ್ತು ಒಂದು ಸೆಟ್ ನಕಲು ಪ್ರತಿಗಳೊಂದಿಗೆ ಅಕ್ಟೋಬರ್ 18 ರಂದು ಬೆಳಿಗ್ಗೆ 11 ಗಂಟೆಯೊಳಗೆ ಕಾಸರಗೋಡಿನ ಜಿಲ್ಲಾ ಸಾಮಾಜಿಕ ನೀತಿ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಕ್ಯೆ(04994 255074)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

