ಕಾಸರಗೋಡು: ಮಧುರು ಗ್ರಾಂ ಪಂಚಾಯಿತಿ ಅಧೀನದಲ್ಲಿ ಚಟುವಟಿಕೆ ನಡೆಸುತ್ತಿರುವ ದೀನ ದಯಾಳ್ ಬಡ್ಸ್ ಶಾಲೆಗೆ ಶಾಲಾ ವಾಹನ ಹಸ್ತಾಂತರ ಸಮಾರಂಭ ಮಧೂರು ಗ್ರಾಮ ಪಂಚಾಯಿತಿ ವಠಾರದಲ್ಲಿಜರುಗಿತು.
ಬೆಂಗಳೂರು ಆಧಾರಣೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲಾ ವಾಹನ ಕೊಡುಗೆಯಾಗಿ ನೀಡಲಾಗಿತ್ತು. ಟ್ರಸ್ಟ್‍ನ ಸಂಸ್ಥಾಪಕ ಹಾಗೂ ಸ್ಥಾಪಕ ಅಧ್ಯಕ್ಷ ಡಾ. ಎಂ. ಗುರು ಪ್ರಸಾದ್ ಅವರು ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲ ಕೃಷ್ಣ ಅವರಿಗೆ ವಾಹನದ ಪ್ರಮಾಣ ಪತ್ರ ವಿತರಿಸಿದರು. ಪಂಚಾಯಿತಿ ಉಪಾಧ್ಯಕ್ಷೆ ಸ್ಮಿಜಾ ವಿನೋದ್, ಸ್ಥಾಯಿ ಅಧ್ಯಕ್ಷ ರಾಧಾಕೃಷ್ಣ ಸೂರ್ಲು, ಬ್ಲಾಕ್ ಪಂಚಾಯಿತಿ ಸದಸ್ಯರಾದ ಸುಕುಮಾರ ಕುದ್ರೆಪ್ಪಾಡಿ, ಜಮೀಲಾ ಅಹಮ್ಮದ್, ಪಂಚಾಯಿತಿ ಕಾರ್ಯದರ್ಶಿ ನೀತು ಸಿಜಿ ಮೋನ್, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.




