ಮಂಜೇಶ್ವರ: ವರ್ಕಾಡಿ ಕೊಂಡೆವೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಮಹಾಸಭೆ ದೇವಸ್ಥಾನದ ವಠಾರದಲ್ಲಿ ಜರುಗಿತು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಸೇವಾ ಟ್ರಸ್ಟಿನ ಅಧ್ಯಕ್ಷ ಸೋಮನಾಥ ಕಾರಂತರ ಅಧ್ಯಕ್ಷತೆಯಲ್ಲಿ ಸಭೆಯು ನಡೆಯಿತು. ಮೊಕ್ತಸರ ಐತಪ್ಪ ಶೆಟ್ಟಿ ದೇವಂದಪಡ್ಪು, ಟ್ರಸ್ಟಿನ ಸದಸ್ಯರಾದ ದೇವಪ್ಪ ಶೆಟ್ಟಿ ಚಾವಡಿಬೈಲು ಗುತ್ತು, ಪಾವೂರು ಪೆÇಯ್ಯೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಮನೋಹರ ಶೆಟ್ಟಿ ಕೆದುಂಬಾಡಿ, ಹಿರಿಯರಾದ ಶ್ಯಾಮ್ ಭಟ್ ಕೆದಂಬಾಡಿ, ಚಂದ್ರಾಹಾಸ ಪೂಜಾರಿ ಮುಡಿಮಾರು, ಆನಂದ ಬಳ್ಳೂರು ,ಪದ್ಮನಾಭ ಅಡ್ಯಾಂತಾಯ ಕಾಪು, ಅರುಣ್ ಕುಮಾರ್ ಶೆಟ್ಟಿ ಪೆರ್ಮನಂಜಿ, ರವಿಮುಡಿಮಾರ್ ಉಪಸ್ಥಿತರಿದ್ದರು. ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಆಡ್ಯಂತಾಯರು. ಸ್ವಾಗತಿಸಿದರು. ಈ ಸಂದರ್ಭ ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಘಾಗಿ ಶ್ರೀ ಅನಂತ ಪದ್ಮನಾಭ ದೇವಸ್ಥಾನ ಅಭಿವೃದ್ಧಿ ಸಮಿತಿ ರಚಿಸಲಾಯಿತು.
ಶ್ಯಾಮ್ ಭಟ್ ಗೌರವಾಧ್ಯಕ್ಷ, ಮನೋಹರ ಶೆಟ್ಟಿ ಅಧ್ಯಕ್ಷ, ಶಶಾಂಕ್ ಮುಡಿಮಾರ್ ಪ್ರಧಾನ ಕಾರ್ಯದರ್ಶಿ, ಪವನ್‍ಕುಮಾರ್ ಶೆಟ್ಟಿ ಕೋಶಾಧಿಕಾರಿ, ರವಿಮುಡಿಮಾರ್ ಪ್ರಧಾನ ಸಂಚಾಲಕ, ಹದಿನೈದುಮಂದಿ ಗೌರವ ಸಲಹೆಗಾರರು ಹಾಗೂ 12ಮಂದಿ ಗೌರವ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

