ಕುಂಬಳೆ: ಸೀತಾಂಗೋಳಿ ಪೇಟೆಯಲ್ಲಿ ಬದಿಯಡ್ಕ ನಿವಾಸಿ ಅನಿಲ್‍ಕುಮಾರ್ ಯಾನೆ ಕುಟ್ಟನ್ ಎಂಬವರನ್ನು ಇರಿದು ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ನೀರ್ಚಾಲು ಬೇಳ ಚೌಕಾರು ನಿವಾಸಿ ಅಕ್ಷಯ್(34)ಎಂಬಾತನನ್ನು ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಪಿ.ಕೆ ಜಿಜೀಶ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ತಂಡದಲ್ಲಿ 12ಮಂದಿ ಆರೋಪಿಗಳಿದ್ದು, ಇತರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬದಿಯಡ್ಕ ಪೇಟೆಯಲ್ಲಿ ಮೀನಿನ ವ್ಯಾಪಾರಿಯಾಗಿದ್ದ ಅನಿಲ್‍ಕುಮಾರ್ ಅವರನ್ನು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಮಾತುಕತೆ ನಡೆಸಲು ಭಾನುವಾರ ತಡರಾತ್ರಿ ಸೀತಾಂಗೋಳಿಗೆ ಕರೆಸಿಕೊಂಡಿದ್ದ ತಂಡ ಮಾರಕಾಯುಧದಿಂದ ಇರಿದು ಕೊಲೆಗೆ ಯತ್ನಿಸಿತ್ತು. ಇದರಿಂದ ಚಾಕು ಅನಿಲ್‍ಕುಮಾರ್ ಅವರ ಕತ್ತಿನ ಹಿಂಭಾಗದಲ್ಲಿ ಸಿಲುಕಿಕೊಂಡಿದ್ದು, ಶಸ್ತ್ರ ಚಿಕಿತ್ಸೆ ಮುಲಕ ಹೊರತೆಗೆಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಸಂಚಾರಕ್ಕೆ ಬಳಸಿದ್ದ ಎರಡು ವಆಹನಗಳನ್ನೂ ವಶಕ್ಕೆ ತೆಗೆದುಕೊಮಡಿದ್ದರು.

