ಕಾಸರಗೋಡು: ಕಾಞಂಗಾಡು ಸೌತ್ ಮಾತೋಪ್ ಕ್ಷೇತ್ರ ಸನಿಹದ ನಿವಾಸಿ, ಯುವ ಇಂಜಿನಿಯರ್ ಪ್ರಣವ್(33)ಎಂಬವರು ನಾಪತ್ತೆಯಾಘಿರುವ ಬಗ್ಗೆ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ಪ್ರವೀಣ್ ಅವರ ಮೊಬೈಲ್, ಚಪ್ಪಲಿ ಹಾಗೂ ಪತ್ರವೊಂದು ಬೇಕಲಕೋಟೆ ಸನಿಹದ ಕಡಪ್ಪುರದಲ್ಲಿ ಪತ್ತೆಯಾಗಿದೆ. ಮೊಬೈಲ್ ರಿಂಗಣಿಸುತ್ತಿರುವುದನ್ನು ಕೇಳಿ ಸ್ಥಳೀಯ ನಿವಾಸಿ ಬೇಕಲ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದನು. ಪೊಲೀಸರು ಸ್ಥಳಕ್ಕಾಗಮಿಸಿ ಮೊಬೈಲ್ ತಪಸಣೆ ನಡೆಸಿದಗ ಪ್ರವೀನ್ ಅವರದ್ದೆಂದು ಪತ್ತೆಹಚ್ಚಲಾಗಿದೆ. 'ಎಲ್ಲರೂ ನನ್ನನ್ನು ಕ್ಷಮಿಸಿ'ಎಂಬ ಒಕ್ಕಣೆ ಪತ್ರದಲ್ಲಿದ್ದು, ಇವರು ಪತ್ರ ಬರೆದಿಟ್ಟಿರಬೇಕೆಂದು ಸಂಶಯಿಸಲಾಗಿದೆ. ಪ್ರಣವ್ ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದರು.
ಈ ಮಧ್ಯೆ ಸಮುದ್ರದಲ್ಲಿ ವ್ಯಕ್ತಿಯೊಬ್ಬರು ನೀರುಪಾಲಾಗಿರುವ ಬಗ್ಗೆ ಊಹಾಪೋಹ ಹರಡಿದೆ. ಪೊಲೀಸರು, ಸ್ಥಳೀಯರು ಹಾಗೂ ಅಗ್ನಿಶಾಮಕದಳ ಪ್ರಣವ್ ಅವರಿಗಾಗಿ ಹುಡುಕಾಟ ಮುಂದುವರಿಸಿದೆ. ಪ್ರಣವ್ ಗುರುವಾರ ಸಂಜೆಯಿಮದ ನಾಪತ್ತೆಯಾಗಿರುವ ಬಗ್ಗೆ ಇವರ ತಂದೆ ಪೊಲೀಸರಿಗೆ ದೂರು ನೀಡಿದ್ದರು.



