ಕಾಸರಗೋಡು: ರೈಲಿನಲ್ಲಿ ಯುವತಿಯ 30ಗ್ರಾಂ ಚಿನ್ನಾಭರಣ ಸೇರಿದಂತೆ ವಿವಿಧ ಸಾಮಗ್ರಿ ಕಳವುಗೈದ ಆರೋಪಿ ತಿರುವನಂತಪುರ ನೆಡುಮಂಗಾಡ್ ನಿವಾಸಿ ಅಶ್ವಿನ್ ಎಂಬಾತನನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬೇರೊಂದು ಕಳವು ಪ್ರಕರಣಕ್ಕೆ ಸಂಬಂಧಿಸಿ ಇಡುಕ್ಕಿ ಪೊಲೀಸರು ಈತನನ್ನು ಬಂಧಿಸಿದ್ದು, ಮಾಹಿತಿ ಪಡೆದ ಕಾಸರಗೋಡು ರೈಲ್ವೆ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದರು.
ಕಾಚಿಗುಡದಿಂದ ಮುರುಡೇಶ್ವರ ತೆರಳುವ ರೈಲಿನಲ್ಲಿ ಆ. 26ಹಾಗೂ 27ರ ಮಧ್ಯೆ ಹೈದರಾಬಾದ್ ನಿವಾಸಿ ಯುವತಿಯ ಚಿನ್ನ ಹಾಗೂ ವಿವಿಧ ಸಾಮಗ್ರಿ ಒಳಗೊಂಡ ಬ್ಯಾಗನ್ನು ಕಳವುಗೈದಿರುವ ಬಗ್ಗೆ ಯುವತಿ ನೀಡಿದ ದೂರಿನನ್ವಯ ಕಾಸರಗೋಡು ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.



