ಕಾಸರಗೋಡು: ಅಖಿಲ ಭಾರತ ಮಾಸ್ಟರ್ ಪ್ರಿಂಟರ್ಸ್ ಒಕ್ಕೂಟ(ಎಐಎಫ್‍ಎಂಪಿ)ದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜಿಲ್ಲೆಯ ಪತ್ರಿಕೋದ್ಯಮಿ ಮುಜೀಬ್ ಅಹ್ಮದ್ ಅವರನ್ನು ಕವಿ ಟಿ.ಉಬೈದ್ ಕಲಾ ಸಾಹಿತ್ಯ ಅಧ್ಯಯನ ಕೇಂದ್ರದ ವತಿಯಿಂದ ಅಭಿನಂದಿಸಲಾಯಿತು.
ನಗರದ ಹೋಟೆಲ್ ಸಿಟಿ ಟವರ್ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿ ಮಾತನಾಡಿ, ಮುಜೀಬ್‍ಅಹಮ್ಮದ್ ಅವರು ಎಐಎಫ್‍ಎಂಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಜಿಲ್ಲೆಯ ಮುದ್ರಣ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ಲಭಿಸಲಿರುವುದಾಗಿ ತಿಳಿಸಿದರು. ಅಧ್ಯಯನ ಕೇಂದ್ರದ ಅಧ್ಯಕ್ಷ ಯಾಹ್ಯಾ ತಳಂPಗರೆ ಅಧ್ಯಕ್ಷತೆ ವಹಿಸಿದ್ದರು. ಅಧ್ಯಯನ ಕೇಂದ್ರ ಉಪಾಧ್ಯಕ್ಷ, ಹಿರಿಯ ಪತ್ರಕರ್ತ ರಹಮಾನ್ ತಾಯಲಂಗಾಡಿ ಮುಜೀಬ್ ಅವರನ್ನು ಪರಿಚಯಿಸಿದರು. ಅನಿವಾಸಿ ಉದ್ಯಮಿ ಯಾಹ್ಯಾ ತಳಂಗರೆ ಅವರು ಮುಜೀಬ್ ಅವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಕೋಶಾಧಿಕಾರಿ ಎ.ಅಬ್ದುಲ್ ರಹಮಾನ್, ಉಪಾಧ್ಯಕ್ಷ ವಕೀಲ ಬಿ.ಎಫ್.ಅಬ್ದುಲ್ ರಹಮಾನ್, ಕಾರ್ಯದರ್ಶಿ ಪಿ.ಎಸ್. ಹಮೀದ್, ಜಯರಾಮ್ ಎಂ.ನೀಲೇಶ್ವರ, ಕೆ.ಎಸ್. ಅನ್ವರ್ ಸಾದತ್, ಕೆ.ಎಂ. ಅಬ್ಬಾಸ್, ಎ.ಕೆ. ಶ್ಯಾಮಪ್ರಸಾದ್, ಕೆ.ಎಂ. ಅಬ್ದುಲ್ ರಹಮಾನ್, ಅಶ್ರಫಲಿ ಚೇರಂಗೈ, ವಕೀಲ ವಿ.ಎಂ. ಮುನೀರ್, ರಹೀಮ್ ಚೂರಿ, ನಿಸಾರ್ ಪೆರ್ವಾಡ್, ಮೊಯಿನುದ್ದೀನ್, ಎರಿಯಾಲ್ ಶರೀಫ್, ಫಾರೂಕ್ ಖಾಸಿಮಿ, ಶಿಫಾನಿ ಮುಜೀಬ್ ಉಪಸ್ಥಿತರಿದ್ದರು. ಅಧ್ಯಯನ ಕೇಂದ್ರದ ಪ್ರಧಾನ ಕಾರ್ಯದರ್ಶಿ ಟಿ.ಎ. ಶಾಫಿ ಸ್ವಾಗತಿಸಿದರು.


