ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಅಪರಾಧಿ ಚೀಮೇನಿ ಮಾಣಿಯೋಟ್ ನಿವಾಸಿ ಪ್ರತೀಶ್ ಎ.ವಿ(44)ಎಂಬಾತನಿಗೆ ಹೊಸದುರ್ಗ ಫಾಸ್ಟ್ ಟ್ರ್ಯಾಕ್ ಸ್ಪೆಶ್ಯಲ್ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಪಿ.ಎಂ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು25ಸಾವಿರ ರೂ. ದಂಡ ವಿಧಿಸಿ ತೀರ್ಪಿತ್ತಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರೋಪಿ ಆರು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
2022 ಡಿಸೆಂಬರ್ ಮತ್ತು 2023ರ ಜನವರಿ ತಿಂಗಳ ನಿಗದಿತ ದಿನದಲ್ಲಿ ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ಅಕ್ರಮವಾಗಿ ನುಗ್ಗಿ, ಮನೆಯೊಳಗೆ ಏಕಾಂಗಿಯಾಗಿ ಟಿ.ವಿ ವೀಕ್ಷಿಸುತ್ತಿದ್ದ 12ರ ಹರೆಯದ ಬಾಲಕಿಗೆಲೈಂಗಿಕ ಕಿರುಕುಳ ನೀಡಿದ ದೂರಿನನ್ವಯ ಚೀಮೇನಿ ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದರು.

