ಕಾಸರಗೋಡು: ವಿದ್ಯಾನಗರ ಚಿನ್ಮಯ ಕಾಲೋನಿಯ 'ಶ್ರೀರಾಗತ್' ನಿವಾಸಿ, ಸರ್ಕಾರಿ ಕಾಲೇಜು ನಿವೃತ್ತ ಪ್ರಾಂಶುಪಾಲ, ಕಾಲೇಜು ಶಿಕ್ಷಣ ಇಲಾಖೆಯ ಮಾಜಿ ಉಪನಿರ್ದೇಶಕ, ಪರಿಸರ ಮತ್ತು ಭೂ ವಿಜ್ಞಾನ ತಜ್ಞ ಪ್ರೊ. ವಿ. ಗೋಪಿನಾಥನ್ (71)ಪ್ರವಾಸದ ಮಧ್ಯೆ ಮಲಪ್ಪುರಂನಲ್ಲಿ ನಿಧನರಾದರು.
'ಕಾಸರಗೋಡು ಟ್ರಾವೆಲ್ಸ್ ಕ್ಲಬ್£'ಆಯೋಜಿಸಿದ್ದ ಮಲಪ್ಪುರಂ ಜಿಲ್ಲಾ ಅಧ್ಯಯನ ಪ್ರವಾಸದ ನೇತೃತ್ವ ವಹಿಸಿದ್ದ ಇವರಿಗೆ ಮಂಗಳವಾರ ರಾತ್ರಿ ಎದೆನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣ ವಂಡೂರಿನ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಒಟ್ಟು 43ಸದಸ್ಯರನ್ನೊಳಗೊಂಡ ಅಧ್ಯಯನ ಪ್ರವಾಸದ ನೇತೃತ್ವ ವಹಿಸಿದ್ದ ಪ್ರೊ. ಗೋಪಿನಾಥನ್ ಅವರು ಅತ್ಯಂತ ಲವಲವಿಕೆಯಿಂದ ಪ್ರವಾಸದಲ್ಲಿ ಪಾಲ್ಗೊಂಡಿದ್ದ ಮಧ್ಯೆ ಏಕಾಏಕಿ ಅಸೌಖ್ಯ ಕಾಣಿಸಿಕೊಂಡಿತ್ತು.
ಕಾಸರಗೋಡು ಸರ್ಕಾರಿ ಕಾಲೇಜಿನಿಂದ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಅವರು ಇಲ್ಲಿಯೇ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿ, 25ವರ್ಷಕ್ಕೂ ಹೆಚ್ಚು ಕಾಲ ಭೂವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ನಂತರ ಕಾಲೇಜು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ನಿವೃತ್ತಿಯ ನಂತರ, ಅವರು ಮಡಿಕೈ ಐಎಚ್‍ಆರ್‍ಡಿ ಕಾಲೇಜು ಮತ್ತು ಕಾಸರಗೋಡು ತ್ರಿವೇಣಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ತಜ್ಞ ಸಮಿತಿಯ ಸದಸ್ಯರಾದ ಗೋಪಿನಾಥನ್, ಸರ್ಕಾರಕ್ಕೆ ಹಲವಾರು ಪರಿಸರ ಅಧ್ಯಯನ ವರದಿಗಳನ್ನು ಸಲ್ಲಿಸಿದ್ದರು. ಅವರು ಕಾಸರಗೋಡು ಪೀಪಲ್ಸ್ ಫೆÇೀರಮ್, ಲಯನ್ಸ್ ಕ್ಲಬ್ ಮತ್ತು ಚಿನ್ಮಯ ಕಾಲೋನಿ ನಿವಾಸಿಗಳ ಸಂಘದ ಅಧ್ಯಕ್ಷರಾಗಿದ್ದರು. ಅವರು ಕಾಸರಗೋಡು ಟ್ರಾವೆಲ್ ಕ್ಲಬ್‍ನ ಮುಖ್ಯ ಪ್ರವಾಸ ಸಲಹೆಗಾರ ಮತ್ತು ಮುಖ್ಯ ಪೆÇೀಷಕರಾಗಿದ್ದರು. ಅವರು ಪತ್ನಿ,ಪುತ್ರ, ಪುತ್ರಿಯನ್ನು ಅಗಲಿದ್ದಾರೆ.


