ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ವತಿಯಿಂದ ವರ್ಷಂಪ್ರತಿ ಜರುಗುವ ಸಾಮೂಹಿಕ ಗೋಪೂಜೆ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೆರವೇರಿತು. ವೇದಮೂರ್ತಿ ನಾಗೇಂದ್ರ ಭಟ್ ಸಮಾರಂಭ ಉದ್ಘಾಟಿಸಿದರು.
ವಿಹಿಂಪ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಚಂದ್ರಮೋಹನ್ ಗೋಪೂಜೆ ಹಾಗೂ ಗೋಮಯದ ಮಹತ್ವದ ಬಗ್ಗೆ ಮಾಃಇತಿ ನಿಡಿದರು. ವಿ.ಎಚ್.ಪಿ. ಹಿರಿಯ ಕಾರ್ಯಕರ್ತರಾದ ಎ.ಟಿ.ನಾಯ್ಕ್ ಉಪಸ್ಥಿತರಿದ್ದರು.
ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳಾದ ಅನುಶ್ರೀ ಮತ್ತು ಛಾಯಾಶ್ರೀ ಗೋವಿನ ಹಾಡಿನ ಪ್ರಾರ್ಥನೆ ನಡೆಸಿದರು. ಪ್ರಖಂಡ ಉಪಾಧ್ಯಕ್ಷ ಕೆ.ಎನ್.ರಾಮಕೃಷ್ಣ ಹೊಳ್ಳ ಸ್ವಾಗತಿಸಿದರು. ಪ್ರಖಂಡ ಅಧ್ಯಕ್ಷ ಶ್ರೀ ಗುರುಪ್ರಸಾದ್ ಕೋಟೆಕಣಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಕಿಶೋರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿ.ಎಚ್.ಪಿ. ಹಿರಿಯ ಕಾರ್ಯಕರ್ತ ಲಕ್ಷ್ಮೀಕಾಂತ ವಂದಿಸಿದರು. ಬಾಲಗೋಕುಲದ ಮಕ್ಕಳು ಹಾಗೂಮಾತೆಯರು ಗೋಮಾತೆಗೆ ದೀಪ ಬೆಳಗಿಸಿದರು. ನಂತರ ಮಕ್ಕಳು ಪಟಾಕಿ ಸಿಡಿಸಂಭ್ರಮಿಸಿದರು.


