ಕುಂಬಳೆ: ಎಸ್ ಎಲ್ ಭೈರಪ್ಪನವರು ನಾಡು ಕಂಡ ಮಹಾನ್ ವ್ಯಕ್ತಿ, ಅವರ ಸಾಹಿತ್ಯ ಕೃತಿ ಮುಂದಿನ ಪೀಳಿಗೆಗೆ ದಾರಿದೀಪ. ಅವರ ನೆನಪು ಜನಮನದಲ್ಲಿ ಸ್ಥಿರ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವುದು ನಮ್ಮ ಕರ್ತವ್ಯ. ಅವರು ಸಿದ್ಧಾಂತಗಳನ್ನು ಯಾವಾಗಲೂ ಗಟ್ಟಿಯಾಗಿ ಪಾಲಿಸಿಕೊಂಡು ಬಂದ ಮಹಾನ್ ವ್ಯಕ್ತಿ ಎಂದು ಮಿಜೋರಾಂ ಮಾಜಿ ರಾಜ್ಯಪಾಲ ಕುಮ್ಮನ ರಾಜಶೇಖರನ್ ತಿಳಿಸಿದರು.
ಅವರು ಪೆರ್ಣೆ ಸಾಯಿ ತನ್ವಿ ಪುಸ್ತಕಾಲಯದಲ್ಲಿ ಆಯೋಜಿಸಿದ ಎಸ್.ಎಲ್. ಭೈರಪ್ಪರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆಗೈದು ಮಾತನಾಡಿದರು.
ಶಿವಶಂಕರ ನೆಕ್ರಾಜೆ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ನುಡಿ ನಮನ ಸಲ್ಲಿಸಿದರು ಈ ಸಂದರ್ಭದಲ್ಲಿ ಸುಧಾಮ ಗೋಸಾಡ, ಸುನಿಲ್, ಮುಜುಂಗವು ಶ್ರೀಭಾರತೀ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯ ರವಿ ನಾರಾಯಣ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ಶಿವಶಂಕರ್ ಸ್ವಾಗತಿಸಿ, ತರುಣ್ ವಂದಿಸಿದರು. ಕಾಸರಗೋಡು ಗಡಿನಾಡು ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಕಾರ್ಯಕ್ರಮ ನಿರೂಪಿಸಿದರು.




.jpg)
