ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಹಾಗೂ ಶ್ರೀ ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಕ್ರೀಡಾಮೇಳ ಗುರುವಾರ ಸಮಾರೋಪಗೊಂಡಿತು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀಮ ಟೀಚರ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದರು. ಮೀಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಯರಾಮ.ಬಿ. ಅಧ್ಯಕ್ಷತೆ ವಹಿಸಿದ್ದರು. ಕೇರಳ ಶಿಕ್ಷಣ ಇಲಾಖೆಯ ರಾಜ್ಯ ಯೋಜನಾಧಿಕಾರಿ ಇಬ್ರಾಹಿಂ.ಬಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಕಾಸರಗೋಡು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಕಮಲಾಕ್ಷಿ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ. ರಾಧಾಕೃಷ್ಣ ಭಟ್, ಮೀಂಜ ಗ್ರಾಮ ಪಂಚಾಯತಿ ಸದಸ್ಯರಾದ ನಾರಾಯಣ ತುಂಗ, ಜ್ಯೋತಿ ರೈ, ಚಂದ್ರಶೇಖರ, ಆಶಾಲತ.ಬಿ.ಎಂ, ರೇಖಾ. ಕೆ, ಅಬ್ದುಲ್ ರಜಾಕ್. ಎಂ, ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಧರ ರಾವ್, ಮೀಯಪದವು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗೌತಮ್. ಆರ್.ಬಿ, ಮಂಜೇಶ್ವರ ಬ್ಲಾಕ್ ಯೋಜನಾ ಸಂಚಾಲಕಿ ಸುಮಾದೇವಿ, ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಪಿ.ಟಿ.ಎ ಅಧ್ಯಕ್ಷ ಜಗದೀಶ.ಸಿ, ಸ್ಕೂಲ್ ಪ್ರೊಟೆಕ್ಷನ್ ತಂಡದ ಸಂಚಾಲಕ ಚಂದ್ರಶೇಖರ. ಎಂ ಶುಭಾಶಂಸನೆಗೈದರು. ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಡಿ.ಎಸ್. ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ಕ್ರೀಡಾಮೇಳದ ಸ್ವಾಗತ ಸಮಿತಿಯ ಸಹ ಸಂಚಾಲಕ ರಾಮಚಂದ್ರ. ಕೆ.ಎಂ. ವಂದಿಸಿದರು. ಸಂಘಟನಾ ಸಮಿತಿಯ ಸಂಚಾಲಕ ಕಿರಣ್ ಕೆ.ಎಸ್.ನಿರೂಪಿಸಿದರು.




.jpg)
