ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯ `ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೋ ನೀರ್ಚಾಲು ಶಾಖೆಯ ಸಕ್ರಿಯ ಸದಸ್ಯ ಕುಮಾರನ್ ನಾಯರ್ ಪಿ. ಎಮ್. ಅವರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಧನಸಹಾಯವಾಗಿ ಎರಡು ಲಕ್ಷ ರೂ. ಮೊತ್ತದ ಚೆಕ್ ನ್ನು ಅವರ ಪತ್ನಿ ಸರೊಜಿನಿ ಅವರಿಗೆ ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಶಂ.ನಾ. ಖಂಡಿಗೆ ಶುಕ್ರವಾರ ವಿತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕ ಪದ್ಮರಾಜ್ ಪಟ್ಟಾಜೆ, ಪ್ರಾಂತೀಯ ಪ್ರಬಂಧಕ ಚಂದ್ರ ಯಂ, ನೀರ್ಚಾಲ್ ಶಾಖೆಯ ಪ್ರಬಂಧಕ ಗಣೇಶ್ ಪಿ, ಬದಿಯಡ್ಕ ಶಾಖೆಯ ಪ್ರಬಂಧಕ ಶ್ಯಾಂಪ್ರಶಾಂತ್ ಮತ್ತು ಶಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




.jpg)
