ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ವಿಜ್ಞಾನ ಮೇಳವು ಅಕ್ಟೋಬರ್ 13, ಮತ್ತು 14 ರಂದು ಕೊಡ್ಲಮೊಗರು ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆ ಹಾಗೂ ಶ್ರೀ ವಾಣಿ ವಿಜಯ ಎಯುಪಿ ಶಾಲೆಯಲ್ಲಿ ನಡೆಯಲಿದೆ.
ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲಾ ಸಂಚಾಲಕ ಶಂಕರ ಮೋಹನ ಪೂಂಜ ಅಡೇಕಳ ದ್ವಜಾರೋಹಣ ನಡೆಸುವರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ವಿಜ್ಞಾನಮೇಳ ಉದ್ಘಾಟಿಸುವರು. ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ. ಎಸ್ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಯುತ ಜಾರ್ಜ್ ಕ್ರಾಸ್ತಾ ಪ್ರಾಸ್ತಾವಿಕ ಭಾಷಣ ಮಾಡುವರು.
ಜಿಲ್ಲಾ ಪಂಚಾಯತ್ ಸದಸ್ಯರಾದ ನಾರಾಯಣ ನಾಯ್ಕ್, ಕಮಲಾಕ್ಷಿ ಕೆ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಸರೋಜಾ ಬಲ್ಲಾಳ್, ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೆಶಕ ಮಧುಸೂದನನ್ ಟಿ.ವಿ, ಶಿಕ್ಷಣ ಇಲಾಖೆಯ ರಾಜ್ಯ ಯೋಜನಾಧಿಕಾರಿ ಇಬ್ರಾಹಿಂ ಬಿ, ಮಂಜೇಶ್ವರ ಠಾಣೆ ಪೆÇಲೀಸ್ ಅಧಿಕಾರಿ ಅನುಪ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.




