ಪೆರ್ಲ : ಶಬರಿಮಲೆಯಿಂದ ಚಿನ್ನ ಕದ್ದು ಭಕ್ತರನ್ನು ವಂಚಿಸಿದ ಆಡಳಿತರೂಢ ಸರ್ಕಾರ ಮತ್ತು ದೇವಸ್ವಂ ಬೋರ್ಡ್ ಗಳ ನಡತೆಯನ್ನು ಖಂಡಿಸಿ ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಪೆರ್ಲ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪ್ರತಿಭಟನಾ ಸಭೆಯನ್ನು ಮಂಡಲ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ನೇತಾರರಾದ ಆಮು ಅಡ್ಕಸ್ಥಳ, ಮಾಯಿಲ ನಾಯ್ಕ್, ಹರಿನಾಥ ರೈ, ಆರೀಸ್ ಎಂ.ಎಚ್, ಬಟ್ಯ ನಲ್ಕ, ಶ್ರೀನಿವಾಸ ಶೆಣೈ,ಜನಾರ್ಧನ ರೈ, ಜಬ್ಬಾರ್ ನಲ್ಕ, ನಾರಾಯಣ ರೈ ಖಂಡಿಗೆ, ರಸಾಕ್ ನಲ್ಕ, ಹನೀಪ್ ಕಾಟುಕುಕ್ಕೆ, ದಿನೇಶ್ ಕುಕ್ಕಿಲ, ಕಮಲಾಕ್ಷ, ನಾರಾಯಣ ಮೊದಲಾದವರು ಭಾಗವಹಿಸಿದರು.






