ಮುಜಫರ್‌ನಗರ: ಸೌದಿ ಅರೇಬಿಯಾದಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ 24 ವರ್ಷದ ವ್ಯಕ್ತಿಯೊಬ್ಬರು ಭಾರತದಲ್ಲಿ ವಾಸವಿದ್ದ ಹೆಂಡತಿಯೊಂದಿಗೆ ವಿಡಿಯೊ ಕಾಲ್‌ನಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಅ.26 ರಂದು ಹೆಂಡತಿಯೊಂದಿಗೆ ವಿಡಿಯೊ ಕಾಲ್‌ನಲ್ಲಿರುವಾಗ ಜಗಳವಾಗಿದ್ದು, ತಕ್ಷಣವೇ ರಿಯಾದ್‌ನಲ್ಲಿರುವ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಅನ್ಸಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ಮೊಹಮ್ಮದ್ ಅನ್ಸಾರಿಗೆ, ಏ .7ರಂದು ಸಾನಿಯಾ(21) ಜತೆ ಮದುವೆಯಾಗಿತ್ತು. ಕೆಲಸದ ನಿಮಿತ್ತ ಎರಡುವರೆ ತಿಂಗಳ ಹಿಂದೆಯಷ್ಟೇ ಅನ್ಸಾರಿ ಅವರು ರಿಯಾದ್‌ಗೆ ತೆರಳಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಘಟನೆಯ ನಂತರ, ಸೌದಿ ಅರೇಬಿಯಾದಲ್ಲಿದ್ದ ಸಂಬಂಧಿಕರಿಗೆ ಪತ್ನಿ ಸಾನಿಯಾ ವಿಷಯ ತಿಳಿಸಿದ್ದಾರೆ. ಅವರು ಅಲ್ಲಿಗೆ ತಲುಪುವ ವೇಳೆಗೆ ಅನ್ಸಾರಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲು ಮುಜಫರ್‌ನಗರಕ್ಕೆ ತರಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.




