ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ನಡೆದ ಕಾಸರಗೋಡು ದಸರಾ ಸಾಂಸ್ಕøತಿಕೋತ್ಸವದಲ್ಲಿ ಪುಂಡೂರು ಪ್ರಭಾವತಿ ಕೆದಿಲಾಯರಿಗೆ ಕಾಸರಗೋಡು ದಸರಾ ಕವಿ ಸಾಧಕ ಪ್ರಶಸ್ತಿ- 2025ನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವದ ರೂವಾರಿ ಡಾ. ಕೆ ವಾಮನ್ ರಾವ್ ಬೇಕಲ್, ಕನ್ನಡ ಭವನ ಪ್ರಕಾಶನದ ಮುಖ್ಯಸ್ಥೆ ಸಂಧ್ಯಾರಾಣಿ ಟೀಚರ್, ಸಾಹಿತಿಗಳಾದ ಕೊಳ್ಚಪ್ಪೆ ಗೋವಿಂದ ಭಟ್; ಡಾ. ಸುರೇಶ ನೆಗಳಗುಳಿ, ಪ್ರಾಧ್ಯಾಪಕ ಜಯಾನಂದ ಪೆರಾಜೆ, ಶೋಭಾ ದಿನೇಶ್ ಉದ್ಯಾವರ ಉಡುಪಿ, ಪತ್ರಕರ್ತ ವಿರಾಜ್ ಅಡೂರು, ಕಸಾಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ದೇವರಾಜ ಆಚಾರ್ಯ ಸೂರಂಬೈಲ್, ಶಿಕ್ಷಕಿಯರಾದ ಡಾ. ಶಾಂತಾ ಪುತ್ತೂರು, ರೇಖಾ ಸುದೇಶ್ ರಾವ್ ಉಪಸ್ಥಿತರಿದ್ದರು.


