ಉಪ್ಪಳ: ತೀವ್ರ ಜನದಟ್ಟಣೆಯ ಸಜಂಕಿಲ -ಬಾಯರ್ ರಸ್ತೆ, ಕುರುಡಪದವು-ಲಾಲ್ ಬಾಗ್ ರಸ್ತೆ, ಹೊಸಂಗಡಿ-ಮಜಿಬೈಲ್-ಕಂಗುಮೆ ರಸ್ತೆ, ವರ್ಕಾಡಿ-ದೈಗೋಳಿ, ಗುವೆದಪಡ್ಪು ರಸ್ತೆ, ಮಂಜೇಶ್ವರ-ಕೆದುಂಬಾಡಿ ರಸ್ತೆಗಳನ್ನು ಸಂಚಾರ ಯೋಗ್ಯಗೊಳಿಸಬೇಕು ಮತ್ತು ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕೆಂದು ಬಿಜೆಪಿ ಮಂಡಲ ಸಮಿತಿ ಅಗ್ರಹಿಸಿದೆ.
ಮಂಜೇಶ್ವರ ಶಾಸಕರ ಹಾಗೂ ಲೋಕಪಯೋಗಿ ಇಲಾಖೆಯ ಬೇಜವಾಬ್ದಾರಿ ಮತ್ತು ಸ್ಥಳೀಯ ಪಂಚಾಯತಿಗಳ ಆಡಳಿತದ ನಿಷ್ಕ್ರಿಯತೆ ಇದಕೆಲ್ಲ ಕಾರಣ. ಜನರ ಸಮಸ್ಯೆಗೆ ಪರಿಹಾರ ಕಾಣದ ಶಾಸಕರು ವಿದೇಶ ಸುತ್ತುವುದು ಬಿಟ್ಟು ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಅಗ್ರಹಿಸಿದ್ದಾರೆ.
ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯು ಕೇಂದ್ರ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ ತಮ್ಮ ಸಾಧನೆ ಎಂಬಂತೆ ಬಿಂಬಿಸುದನ್ನು ಬಿಟ್ಟು ತಮ್ಮ ಇಲಾಖೆಯ ರಸ್ತೆಗಳನ್ನು ದುರಸ್ಥಿ ಮಾಡಲಿ ಎಂದು ಆದರ್ಶ ಬಿ.ಎಂ. ಹೇಳಿದರು.
ಬಾಯರ್-ಧರ್ಮತ್ತಡ್ಕ ರಸ್ತೆ ದುರಸ್ತಿಯ ಹೆಸರಲ್ಲಿ ವ್ಯಾಪಕ ಹಣ ಪೋಲುಮಾಡಲಾಗಿದೆ. ಕುರುಡಪದವು ರಸ್ತೆ ಅವೈಜ್ಞಾನಿಕವಾಗಿದೆ. ಹೊಸಂಗಡಿ-ಮಜಿಬೈಲ್-ಕಂಗುಮೆ ಎಂಬಲ್ಲಿ ರಸ್ತೆ ಅರ್ಥಭಾಗ ಹಾನಿಗೊಂಡು 4 ತಿಂಗಳು ಕಳೆದರೂ ಲೋಕೋಪಯೋಗಿ ಇಲಾಖೆ ಕನಿಷ್ಠ ದುರಸ್ತಿಯನ್ನು ಆರಂಭಿಸದಿರುವುದು ಖಂಡನೀಯ. ಕೂಡಲೇ ಎಲ್ಲಾ ರಸ್ತೆಗಳನ್ನು ವೈಜ್ಞಾನಿಕವಾಗಿ ಮರು ಡಾಮಾರಿಕಾರಣಗೊಳಿಸಬೇಕು, ಅಗತ್ಯವಿದ್ದ ಎಲ್ಲಾ ಕಡೆ ದುರಸ್ಥಿ ಕೂಡಲೇ ಮುಗಿಸದಿದ್ದರೆ ಜನರ ಅಗ್ರಹದಂತೆ ಬಿಜೆಪಿ ಹೋರಾಟ ಮಾಡಲಿದೆ ಎಂದು ಮಂಡಲ ಅಧ್ಯಕ್ಷರು ತಿಳಿಸಿರುವರು.




.jpg)
.jpg)
.jpg)
