ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಕಾಲೇಜು ಹಾಗೂ ತವುಡುಗೋಳಿ ಪಾವೂರು ಹಾಗೂ ಇದಕ್ಕೆ ಸಂಪರ್ಕ ಕಲ್ಪಿಸುವ ಮಧ್ಯ ರಾಷ್ಟ್ರಿಯ ಹೆದ್ದಾರಿ 66 ಹಾದುಹೋಗಿದ್ದು, ಇನ್ನೊಂದು ಬದಿ ಮಂಜೇಶ್ವರ ರೈಲ್ವೆ ನಿಲ್ದಾಣ, ಎಸ್.ಎ.ಟಿ. ವಿದ್ಯಾಸಂಸ್ಥೆ, ರಿಜಿಸ್ಟರ್ ಕಚೇರಿ, ಮಂಜೇಶ್ವರ ಗ್ರಾ.ಪಂ. ಕಾರ್ಯಾಲಯ, ಗ್ರಾಮಾಧಿಕಾರಿಗಳ ಕಚೇರಿ, ಮಂಜೇಶ್ವರ ಖಜಾನೆ ಕಾರ್ಯನಿರ್ವಹಿಸುತ್ತಿದ್ದು ರಾಷ್ಟ್ರೀಯ ಹೆದ್ದಾರಿ ದಾಟಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೇಲ್ಸೇತುವೆ ನಿರ್ಮಾಣ ಮಾಡಿಲ್ಲ. ಆದ್ದರಿಂದ ಎರಡೂ ಬದಿಗಳಿಗೆ ಸಂಚರಿಸಲು ಮೇಲ್ಸೇತುವೆ ನಿರ್ಮಿಸಬೇಕೆಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಣೇಶ್ ಪಾವೂರು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರವನ್ನು ಅಗ್ರಹಿಸಿದ್ದಾರೆ.
ಈ ಬಗ್ಗೆ ಪ್ರಾಧಿಕಾರಕ್ಕೆ, ಕಾಸರಗೋಡು ಜಿಲ್ಲಾಧಿಕಾರಿಗಳು ಆದೇಶ ನೀಡಬೇಕೆಂದು ಜಿಲ್ಲಾಧಿಕಾರಿಗಳನ್ನು ಗಣೇಶ್ ಪಾವೂರು ಅಗ್ರಹಿಸಿದ್ದಾರೆ. ಇಲ್ಲಿ ರಸ್ತೆ ದಾಟಲು ವಿದ್ಯಾರ್ಥಿಗಳು, ಮಹಿಳೆಯರು, ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದು, ಸವಾಲಿನ ಪರಿಹಾರಕ್ಕೆ ಪ್ರಾಧಿಕಾರಕ್ಕೂ ಕೇಂದ್ರ ಸರ್ಕಾರಕ್ಕೂ ಜಿಲ್ಲಾಧಿಕಾರಿ ಸೂಚನೆ ನೀಡಬೇಕೆಂದು ಗಣೇಶ್ ಪಾವೂರು ಅಗ್ರಹಿಸಿದ್ದಾರೆ.




