ಕುಂಬಳೆ: ಮೊಗ್ರಾಲಿನಲ್ಲಿ ನಡೆದ ಕುಂಬಳೆ ಉಪಜಿಲ್ಲಾ ವೃತ್ತಿಪರಿಚಯ ಮೇಳದಲ್ಲಿ ಕಿರಿಯ ಪ್ರಾಥಮಿಕ ವಿಭಾಗದ ಮಡಿಕೆ ಚಿತ್ರಕಲೆಯಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಯಶಿಕ ಸಿ.ಎಸ್. 'ಎ' ಗ್ರೇಡಿನೊಂದಿಗೆ ಪ್ರಥಮ, ಪೇಪರ್ ಕ್ರಾಫ್ಟ್ ನಲ್ಲಿ ತೃಪ್ತಿ ಎಸ್. 'ಎ' ಗ್ರೇಡಿನೊಂದಿಗೆ ಪ್ರಥಮ, ಹಿರಿಯ ಪ್ರಾಥಮಿಕ ವಿಭಾಗದ ಶೀಟ್ ಮೆಟಲ್ ವರ್ಕ್‍ನಲ್ಲಿ ಆದಿಲ್ ಫರ್ ಹಾನ್ 'ಎ' ಗ್ರೇಡಿನೊಂದಿಗೆ ಪ್ರಥಮ ಸ್ಥಾನಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ರಕ್ಷಕ ಶಿಕ್ಷ ಸಂಘ ಅಭಿನಂದನೆ ಸಲ್ಲಿಸಿದೆ.





