ಮುಳ್ಳೇರಿಯ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಪುತ್ತೂರಿನ ದ್ವಾರಕಾ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಪುತ್ತೂರಿನ ಚಿಗುರೆಲೆ ಸಾಹಿತ್ಯ ಬಳಗದ ಸಂಯೋಜನೆಯಲ್ಲಿ 2025ರ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಪುತ್ತೂರು ತಾಲ್ಲೂಕು ಮಟ್ಟದ ಕಾಲೇಜು ವಿಭಾಗದ ಅಂಚೆ ಕಾರ್ಡ್ ಕವನ ಸ್ಪರ್ಧೆಯಲ್ಲಿ ಪುತ್ತೂರಿನ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿ ಆದ್ಯಂತ್ ಎ ಅವರು ದ್ವಿತೀಯ ಬಹುಮಾನ ಪಡೆದಿದ್ದಾರೆ.
ಇವರು ಸುಮಾರು 300ಕ್ಕೂ ಹೆಚ್ಚಿನ ಚುಟುಕುಗಳು ಹಾಗೂ 800 ರೇಖಾ ಚಿತ್ರಗಳನ್ನು ರಚಿಸಿದ್ದಾರೆ. ಇವರ ಸಂದರ್ಶನವು ಮಂಗಳೂರು ಆಕಾಶವಾಣಿಯಿಂದ ಪ್ರಸಾರವಾಗಿದೆ. 'ಚುಟುಕುಟುಕು' ಇವರ ಪ್ರಕಟಿತ ಕೃತಿ. ಇವರಿಗೆ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ವತಿಯಿಂದ ವಿಶಿಷ್ಟ ಪ್ರತಿಭೆ ಪುರಸ್ಕಾರ, ಕರ್ನಾಟಕ ರಾಜ್ಯ ಬೆಳದಿಂಗಳ ಸಾಹಿತ್ಯ ಸಮಿತಿಯ ಬಾಲ ಪ್ರತಿಭಾ ಪ್ರಶಸ್ತಿ, ಅಜೆಕಾರು ಕುರ್ಪಾಡಿಯ ಆದಿಗ್ರಾಮೋತ್ಸವ ಪುರಸ್ಕಾರ, ವಾಂತಿಚ್ಚಾಲಿನ ಜಿ. ಕೆ. ಚಾರಿಟೇಬಲ್ ಟ್ರಸ್ಟಿನ ತುಳುನಾಡ ಸಿರಿ ಪಿಂಗಾರ ಪ್ರಶಸ್ತಿ ಸಹಿತ ಅನೇಕ ಗೌರವಗಳು ದೊರೆತಿವೆ. ಇವರು ಸಾಹಿತಿ ಆಡೂರಿನ ಪ್ರಶಾಂತ ರಾಜ್ ವಿ ತಂತ್ರಿ - ಜಯಂತಿ ದಂಪತಿಯ ಪುತ್ರರಾಗಿದ್ದಾರೆ.




-ADYNTH%20ADOOR.jpg)
